ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ​ರೈನಾ ನೀಡಿರುವ ಹೇಳಿಕೆಯೊಂದು, ವಿವಾದಕ್ಕೆ ಕಾರಣವಾಗಿದೆ. ತಾತೊಬ್ಬ ಬ್ರಾಹ್ಮಣನಾಗಿರುವ ಕಾರಣ, ಚೆನ್ನೈ ಸಂಸ್ಕೃತಿಯನ್ನು ತುಂಬಾ ಚೆನ್ನಾಗಿ ಅಳವಡಿಸಿಕೊಂಡಿದ್ದೇನೆ ಎಂದು ರೈನಾ ಹೇಳಿದ್ದಾರೆ.

ತಮಿಳುನಾಡು ಪ್ರೀಮಿಯರ್ ಲೀಗ್​​​ನ ಆರಂಭಿಕ ಪಂದ್ಯದಲ್ಲಿ ವೀಕ್ಷಕ ವಿವರಣೆಗೆ ಸೇರಲು ಅವರನ್ನ ಆಹ್ವಾನಿಸಿದಾಗ, ಉತ್ತರ ಪ್ರದೇಶದ ರೈನಾ ಈ ಅಭಿಪ್ರಾಯ ಹೊರಹಾಕಿದ್ದಾರೆ. ಲೀಗ್​​ನ ಮೊದಲ ಪಂದ್ಯದ ಸಮಯದಲ್ಲಿ IPLನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ರೈನಾರನ್ನ, ದಕ್ಷಿಣ ಭಾರತದ ಸಂಸ್ಕೃತಿಯನ್ನು ಹೇಗೆ ಸ್ವೀಕರಿಸಿದ್ದೀರಿ ಎಂದು ಕಾಮೆಂಟೇಟರ್ಸ್ ಕೇಳಿದ್ರು.

ಇದಕ್ಕೆ ಉತ್ತರಿಸಿದ ರೈನಾ, ನಾನು ಚೆನ್ನೈನಲ್ಲಿ 2004ರಿಂದ ಆಡುತ್ತಿದ್ದೇನೆ. ನಾನೊಬ್ಬ ಬ್ರಾಹ್ಮಣನಾಗಿರುವ ಕಾರಣ, ಇಲ್ಲಿನ ಸಂಸ್ಕೃತಿಗೆ ಬೇಗನೇ ಹೊಂದಿಕೊಂಡಿದ್ದೇನೆ. ಹಾಗೆಯೇ ಈ ಸಂಸ್ಕೃತಿಯನ್ನ ಹೆಚ್ಚು ಇಷ್ಟಪಡುತ್ತೇನೆ ಎಂದು ಕೂಡ ಹೇಳಿದ್ದಾರೆ. ಇದು ಕೂಡ ಇಲ್ಲಿನ ಸಂಸ್ಕೃತಿಯನ್ನ ಬೇಗನೇ ಅರಿಯಲು ಸಾಧ್ಯವಾಯ್ತು ಎಂದು ರೈನಾ ಹೇಳಿದ್ದಾರೆ. ಆದರಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

 

The post ಬ್ರಾಹ್ಮಣರಾಗಿರೋದ್ರಿಂದ ಚೆನ್ನೈ ಸಂಸ್ಕೃತಿ ಬೇಗನೆ ಅರಿತೆ ಎಂದ ರೈನಾ, ನೆಟ್ಟಿಗರು ಫುಲ್​​ ರೋಸ್ಟ್​ appeared first on News First Kannada.

Source: newsfirstlive.com

Source link