ಬೆಂಗಳೂರು: ಬ್ರಾಹ್ಮಣರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ಕೇಸ್​ ದಾಖಲಾಗಿರೋ ಹಿನ್ನೆಲೆ, ಇಂದು ನಟ ಚೇತನ್ ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಕರಣ ಸಂಬಂಧ ಬಸವನಗುಡಿ ಪೊಲೀಸ್ರು ಚೇತನ್​ಗೆ ನೋಟೀಸ್ ನೀಡಿದ್ದರು. ಹೀಗಾಗಿ ತಮ್ಮ ಸ್ನೇಹಿತರು ಹಾಗೂ ವಕೀಲರ ಜೊತೆ ಚೇತನ್ ಇಂದು ಬಸವನಗುಡಿ ಇನ್ಸ್​ಪೆಕ್ಟರ್ ಆರ್. ರಮೇಶ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ವಿಪ್ರ ಯುವ ವೇದಿಕೆಯ ಪವನ್ ಕುಮಾರ್ ಶರ್ಮಾ ಚೇತನ್ ವಿರುದ್ಧ ದೂರು ನೀಡಿದ್ದರು. ಇದರ ಅನ್ವಯ ಬಸವನಗುಡಿ ಪೊಲೀಸರು ಎಫ್​ಐಆರ್​​ ದಾಖಲಿಸಿದ್ದು, ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚೇತನ್​ಗೆ ಸೂಚಿಸಿದ್ದರು.

The post ಬ್ರಾಹ್ಮಣರ ವಿರುದ್ಧ ಅವಹೇಳನ ಆರೋಪ: ವಿಚಾರಣೆಗೆ ಹಾಜರಾದ ನಟ ಚೇತನ್ appeared first on News First Kannada.

Source: newsfirstlive.com

Source link