ಬೆಂಗಳೂರು: ಅವಹೇಳನಾಕಾರಿ ಹೇಳಿಕೆ ಆರೋಪ ಸಂಬಂಧ ನಟ ಚೇತನ್​ಗೆ ಬಸವನಗುಡಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಈ ಬಗ್ಗೆ ಫೇಸ್​ಬುಕ್​​ನಲ್ಲಿ ಬರೆದುಕೊಂಡಿರುವ ನಟ ಚೇತನ್.. ಬ್ರಾಹ್ಮಣ್ಯದ ವಿರುದ್ಧ ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಪೋಸ್ಟ್‌ಗಳ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಇಂದು ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಿಂದ ನನಗೆ ನೋಟಿಸ್ ಬಂದಿದೆ. ನಾಳೆ ಬೆಳಗ್ಗೆ ನಾನು ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ. ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.

ಬ್ರಾಹ್ಮಣರನ್ನ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ನಟ ಚೇತನ್ ವಿರುದ್ಧ ಪವನ್ ಕುಮಾರ್ ಶರ್ಮಾ ಎಂಬುವವರು ದೂರು ನೀಡಿದ್ದಾರೆ. ದೂರಿನನ್ವಯ ನಟ ಚೇತನ್​ಗೆ ನೋಟಿಸ್ ಕೊಟ್ಟಿದ್ದಾರೆ.

The post ಬ್ರಾಹ್ಮಣ ಸಮುದಾಯದ ಬಗ್ಗೆ ವ್ಯಂಗ್ಯ ಹೇಳಿಕೆ; ನಟ ಚೇತನ್​​ಗೆ ಪೊಲೀಸರಿಂದ ನೋಟಿಸ್ appeared first on News First Kannada.

Source: newsfirstlive.com

Source link