ದಾವಣಗೆರೆ: ಸಚಿವ ಕೆ ಎಸ್ ಈಶ್ಬರಪ್ಪ ವಿರುದ್ಧವೇ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ. ಸಿಎಂ ಪರ ಸಹಿ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಸಹಿ ಸಂಗ್ರಹ ಮಾಡಲು ಹೇಳಿದ್ಯಾರು.? ಹುಲಿ ವೇಷ ಹಾಕಿ ನಾಟಕ ಮಾಡ್ತಾರೆ ಎಂದು ಹೇಳಿಕೆ ನೀಡಿದ್ದರೆನ್ನಲಾದ ಸಚಿವ ಈಶ್ವರಪ್ಪಗೆ ಎಂಪಿ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.

ದಾವಣಗೆರೆಯ ಹೊನ್ನಾಳಿಯಲ್ಲಿ‌ ಮಾತನಾಡಿದ ಅವರು.. ಬಣ್ಣ ಹಚ್ಚೋದು ನನಗೆ ಗೊತ್ತಿಲ್ಲ, ಜನಸೇವೆ ಒಂದೇ ನನಗೆ ಗೊತ್ತಿರೋದು. ಈಶ್ವರಪ್ಪ ಆತ್ಮಾವಲೋಕನ‌ ಮಾಡಿಕೊಳ್ಳಲಿ. ಬಿಎಸ್ ವೈ ಅಧ್ಯಕ್ಷರಾಗಿದ್ದಾಗ ಬ್ರಿಗೇಡ್ ಕಟ್ಟಿ ನೀವು ಯಾವ ವೇಷ ಹಾಕಿದ್ರಿ..? ಸಿಎಂ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ್ದು‌ ಯಾರು..? ಯಡಿಯೂರಪ್ಪ ವಿರುದ್ಧ ನನ್ನನ್ನು ಎತ್ತಿಕಟ್ಟಿದ್ದೀರಿ.. ಕೆಲವು ಶಾಸಕರು ಸೇರಿ 65 ಕ್ಕೂ ಹೆಚ್ಚು ಪತ್ರ ನನ್ನಲ್ಲಿ‌ ಇದೆ. ಬಿಎಸ್ ವೈ ಹೇಳಿದ್ದಕ್ಕೆ ಸಹಿ ಸಂಗ್ರಹ ಸ್ಥಗಿತ ಮಾಡಿದ್ದೇನೆ. 2013 ರಲ್ಲಿ ಈಗಾಗಲೇ ನೋವು ಪಟ್ಟೀದ್ದೀವಿ.. ಇದು ಪದೇ ಪದೇ ಆಗಬಾರದು ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

The post ಬ್ರಿಗೇಡ್ ಕಟ್ಟಿ ನೀವು ಯಾವ ವೇಷ ಹಾಕಿದ್ರಿ..? ಈಶ್ವರಪ್ಪಗೆ ರೇಣುಕಾಚಾರ್ಯ ಟಾಂಗ್ appeared first on News First Kannada.

Source: newsfirstlive.com

Source link