ಬ್ರಿಟನ್ ಪ್ರಧಾನಿಯಾಗಿ ಅಳಿಯ ರಿಷಿ ಸುನಕ್ ಆಯ್ಕೆ: ಬೆಂಗಳೂರಿನ ಸುಧಾಮೂರ್ತಿ ನಿವಾಸದಲ್ಲಿ ಸಂಭ್ರಮಾಚರಣೆ – Celebration In sudha murthy Bengaluru residence For Daughter Husband Rishi Sunak Elected As Britain PM


ಸುಧಾಮುರ್ತಿ ಅವರ ನಿವಾಸದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಇತ್ತು. ಸಂಜೆ ಹೊತ್ತಿಗೆ ಆ ಸಂಭ್ರಮ ಡಬಲ್ ಆಗಿದೆ. ಅಳಿಯ ಬ್ರಿಟನ್​ನ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಬ್ರಿಟನ್ ಪ್ರಧಾನಿಯಾಗಿ ಅಳಿಯ ರಿಷಿ ಸುನಕ್ ಆಯ್ಕೆ:  ಬೆಂಗಳೂರಿನ ಸುಧಾಮೂರ್ತಿ ನಿವಾಸದಲ್ಲಿ ಸಂಭ್ರಮಾಚರಣೆ

Infosys Narayan & Sudha Murthy


ಬೆಂಗಳೂರು: ಬ್ರಿಟನ್​ನ ನೂತನ ಪ್ರಧಾನಮಂತ್ರಿಯಾಗಿ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಇದು ಭಾರರತೀಯರು ಖುಷಿಪಡುವಂತ ವಿಚಾರ. ಯಾಕಂದ್ರೆ, 1980ರ, ಮೇ 12ರಂದು ಬ್ರಿಟನ್​ನಲ್ಲಿ ರಿಷಿ ಸುನಕ್ ಜನಿಸಿದ್ರು. ಯಶ್ವೀರ್-ಉಷಾ ದಂಪತಿ ಪುತ್ರನಾಗಿರೋ ರಿಷಿ ಸುನಕ್ ಅಜ್ಜ-ಅಜ್ಜಿ ಇಬ್ಬರೂ ಪಂಜಾಬ್ ಮೂಲದವರಾಗಿದ್ದಾರೆ. 2009ರಲ್ಲಿ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಜೊತೆಗೆ ರಿಷಿ ಸುನಕ್ ವಿವಾಹವಾಗಿದ್ದಾರೆ. ಇನ್ನು ಅತ್ತ ಅಳಿಯ ರಿಷಿ ಸುನಕ್ ಬ್ರಿಟನ್​ನ ಪ್ರಧಾನಿಯಾಗುತ್ತಿದ್ದಂತೆಯೇ ಇತ್ತ ಬೆಂಗಳೂರಿನಲ್ಲಿ ಸುಧಾಮೂರ್ತಿ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ.

ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ: ರಿಷಿ​ಗೆ ಭಾರತ ಬೇರೆ ದೇಶದಂತೆ, ನೋಡಿ ಖುಷಿಪಡಬೇಕು ಎಂದ​ ಪೈ

ಮಗಳ ಗಂಡ ಒಂದು ದೇಶದ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾನೆ ಅಂದ್ರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ. ಗ್ರಾಮ ಪಂಚಾಯಿತಿ ಸದಸ್ಯರಾದರೂ ಸಂಬಂಧಿಗಳೂ ಸಂಭ್ರಮಿಸುತ್ತಾರೆ. ಹೀಗಿರುವಾಗ ಅಳಿಯ ಬ್ರಿಟನ್​ನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಅಂದ್ರೆ ಸುಮ್ನೇ ನಾ. ಬೆಂಗಳೂರಿನ ಸುಧಾಮೂರ್ತಿ ಅವರ ಮನೆಯಲ್ಲಿ ದೀಪಾವಳಿ ಸಂಭ್ರಮದ ಜೊತೆ ಅಳಿಯ ಬ್ರಿಟನ್ ಪ್ರಧಾನಿಯಾಗಿದ್ದು, ಡಬಲ್ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಸಂಬಂಧಿಕರು ಡಾ.ಸುಧಾಮೂರ್ತಿ ಅವರ ಬೆಂಗಳೂರಿನ ನಿವಾಸಕ್ಕೆ ಆಗಮಿಸುತ್ತಿದ್ದು, ಸಿಹಿ ಹಂಚಿ ಸಂಭ್ರಮಿಸಿಸುತ್ತಿದ್ದಾರೆ.

ಬ್ರಿಟನ್ ಅರ್ಥವ್ಯವಸ್ಥೆ ಅಧ:ಪತನ ಹಿನ್ನೆಲೆಯಲ್ಲಿ, ರಾಜೀನಾಮೆ ಆಗ್ರಹ ಹೆಚ್ಚಾದ ಕಾರಣ ಕನ್ಸರ್ವೇಟಿವ್ ಪಕ್ಷದ ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಬಳಿಕ ಪಕ್ಷದಿಂದ ರಿಷಿ ಸುನಕ್ ಮೊದಲ ಬಾರಿಗೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ರು. ಆದ್ರೆ ತಮ್ಮದೇ ಪಕ್ಷದ ಲಿಜ್ ಟ್ರಸ್ ಎದುರು ಸೋಲನುಭವಿಸಿದ್ರು.

ಬಳಿಕ ದೇಶದ ಅರ್ಥವ್ಯವಸ್ಥೆ ಸುಧಾರಣೆಗೆ ಬೇಕಾದ ಕ್ರಮಗಳನ್ನ ಕೈಗೊಳ್ಳುವಲ್ಲಿ ಲಿಜ್ ಟ್ರಸ್ ವಿಫಲರಾಗಿದ್ರು. ಹೀಗಾಗಿ ಕನ್ಸರ್ವೇಟಿವ್ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿತ್ತು. ಹಲವು ಮಂದಿ ಸಂಸದರು ಬೆಂಬಲ ವಾಪಸ್ ಪಡೆದ್ರು. ಸಚಿವರುಗಳು ರಾಜೀನಾಮೆ ನೀಡಿದ್ರು. ಪರಿಣಾಮ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಮತ್ತೆ ಅಗ್ನಿ ಪರೀಕ್ಷೆಗೆ ಇಳಿದ ರಿಷಿ ಸುನಕ್ ಅಂತಿಮವಾಗಿ 100ಕ್ಕೂ ಹೆಚ್ಚು ಸಂಸದರ ಬೆಂಬಲದಿಂದ, ಬಹುಮತದೊಂದಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಯುಕೆ ಪ್ರಧಾನಿ ರಿಷಿ ಸುನಕ್ ಯಾರು?, ಭಾರತದೊಂದಿಗೆ ಅವರಿಗಿರುವ ಸಂಬಂಧ ಏನು?

ತಾಜಾ ಸುದ್ದಿ

TV9 Kannada


Leave a Reply

Your email address will not be published.