ಬ್ರಿಟಿಷರಲ್ಲಿ ತನ್ನ ಮಕ್ಕಳನ್ನು ಒತ್ತೆಯಿಟ್ಟ ನಂತರವೇ ಟಿಪ್ಪು ಸುಲ್ತಾನ್​ಗೆ ತಾನೆಸಗಿದ ದುಷ್ಕೃತ್ಯಗಳ ಅರಿವಾಗಿತ್ತು: ಎಸ್ ಎಲ್ ಭೈರಪ್ಪ | Tipu Sultan realised his evil deeds only after pledging his sons with British: SL Bhyrappa ARBರಂಗಾಯಣದ ನಿರ್ದೇಶಕ ಕಾರ್ಯಪ್ಪ ಅವರು ಟಿಪ್ಪು ಸುಲ್ತಾನ್ ಅನೇಕ ಕೊಡವರನ್ನು ಕೊಂದ ಮತ್ತು ಮತಾಂತರಗೊಳಿಸಿದ ಬಗ್ಗೆ ಮಾತಾಡಿದಾಗ ರಂಗಾಯಣದ ಹಿಂದಿನ ನಿರ್ದೇಶಕ ಮತ್ತು ಪದಾಧಿಕಾರಿಗಳು ನಡೆಸಿದ ಚಳುವಳಿ ಬಗ್ಗೆ ಬೈರಪ್ಪನವರು ಪ್ರಸ್ತಾಪಿಸಿದರು.

TV9kannada Web Team


| Edited By: Arun Belly

Jun 02, 2022 | 8:12 PM
Mysuru: ಕನ್ನಡದ ಖ್ಯಾತ ಸಾಹಿತಿ ಎಸ್ ಎಲ್ ಬೈರಪ್ಪನವರು (SL Bhyrappa) ಹೊಸ ತಲೆಮಾರಿನ ಪೀಳಿಗೆಯವರಿಗೂ ಚೆನ್ನಾಗಿ ಗೊತ್ತು. ಅವರ ಹಲವು ಕಾದಂಬರಿಗಳು ಇಂಗ್ಲಿಷ್ ಸೇರಿದಂತೆ ಭಾರತದ ಹಲವಾರು ಬಾಷೆಗಳಿಗೆ ಅನುವಾದಗೊಂಡಿವೆ. ಇಂಗ್ಲಿಷ್ ನಲ್ಲಿ ಬೆಸ್ಟ್ ಸೆಲ್ಲರ್ (bestseller) ಅಂತ ಹೇಳ್ತಾರಲ್ಲ, ಭೈರಪ್ಪನವರ ಎಲ್ಲ 25 ಕಾದಂಬರಿಗಳು ಬೆಸ್ಟ್ ಸೆಲ್ಲರ್ ಗಳು. ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿನೆರಳು, ದಾಟು ಕಾದಂಬರಿಗಳನ್ನು ಸಿನಿಮಾ ಮಾಡಲಾಗಿದೆ. ಪಠ್ಯಪುಸ್ತಕಗಳ ವಿಷಯದಲ್ಲಿ ಉಂಟಾಗಿರುವ ವಿಷಯ ಕುರಿತು ಮೈಸೂರಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಅವರು ರಂಗಾಯಣ (Rangayana) ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ, ಟಿಪ್ಪು ಸುಲ್ತಾನ್, ಶಿವಾಜಿ, ರಾಣಾ ಪ್ರತಾಪ ಸಿಂಗ್ ಮೊದಲಾದವ ಬಗ್ಗೆ ಸುದೀರ್ಘವಾಗಿ ಮಾತಾಡಿದರು.

ನಮ್ಮ ರಾಜಕಾರಣಿಗಳು ವೋಟಿಗಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂದು ಹೇಳಿದ ಭೈರಪ್ಪನವರು, ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿದ್ದ ಜಗಮೋಹನ್ ಅವರು ಬರೆದಿರುವ ಮೈ ಫ್ರೋಜನ್ ಟರ್ಬುಲೆನ್ಸ್ ಇನ್ ಕಾಶ್ಮೀರ್ ಪುಸ್ತಕವನ್ನು ತೋರಿಸಿ ಸಾಧ್ಯವಾದರೆ ಎಲ್ಲರನ್ನೂ ಇದನ್ನು ಓದಿ ಅಂತ ಹೇಳಿದರು. ಈ ಪುಸ್ತಕದಲ್ಲಿ ದೆಹಲಿಯಲ್ಲಿ ಆಡಳಿತ ನಡೆಸುವವರು ಹೇಗೆ ಕೇವಲ ವೋಟಿಗಾಗಿ ತಮ್ಮನ್ನು ತಾವು ಕಾಶ್ಮೀರಕ್ಕೆ ಮಾರಿಕೊಂಡಿದ್ದರು ಅನ್ನೋದನ್ನು ವಿವರಿಸಿದ್ದಾರೆ ಅಂತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಜೊತೆ ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮಶ್ರೀ ಪುರಸ್ಕಾರ ಮತ್ತು ಇನ್ನೂ ಗೌರವಗಳಿಗೆ ಪಾತ್ರರಾಗಿರುವ 90 ವರ್ಷ ವಯಸ್ಸಿನ ಭೈರಪ್ಪ ಹೇಳಿದರು.

ರಂಗಾಯಣದ ನಿರ್ದೇಶಕ ಕಾರ್ಯಪ್ಪ ಅವರು ಟಿಪ್ಪು ಸುಲ್ತಾನ್ ಅನೇಕ ಕೊಡವರನ್ನು ಕೊಂದ ಮತ್ತು ಮತಾಂತರಗೊಳಿಸಿದ ಬಗ್ಗೆ ಮಾತಾಡಿದಾಗ ರಂಗಾಯಣದ ಹಿಂದಿನ ನಿರ್ದೇಶಕ ಮತ್ತು ಪದಾಧಿಕಾರಿಗಳು ನಡೆಸಿದ ಚಳುವಳಿ ಬಗ್ಗೆ ಬೈರಪ್ಪನವರು ಪ್ರಸ್ತಾಪಿಸಿದರು. ನಾಟಕವೂ ಚಳುವಳಿಯ ಒಂದು ರೂಪ ಅಂತ ಪ್ರತಿಪಾದಿಸಿದ ಅ ಜನ ಚಳುವಳಿ ನಡೆಸದವನು ಸಾಹಿತಿಯೇ ಅಲ್ಲ ಅಂತ ಹೇಳಿದ್ದರು. ಕಾವ್ಯ ಮತ್ತು ಕಾದಂಬರಿಯ ಹಾಗೆ ನಾಟಕವು ಕೂಡ ಒಂದು ರಸಾನುಭವ ಅನ್ನೋದೇ ಅವರಿಗೆ ಗೊತ್ತಿರಲಿಲ್ಲ ಎಂದು ಭೈರಪ್ಪ ಹೇಳಿದರು. ಟಿಪ್ಪುಗೆ ಬ್ರಿಟಿಷರಲ್ಲಿ ತನ್ನ ಮಕ್ಕಳನ್ನು ಒತ್ತೆಯಿಟ್ಟಾಗಲೇ ತಾನೆಸಗಿದ ತಪ್ಪುಗಳು ಅರಿವಾಗಿತ್ತು ಎಂದು ಅವರು ಹೇಳಿದರು.

ಭಾರತೀಯ ರೇಲ್ವೇಸ್ ಒಂದು ಟ್ರೇನಿಗೆ ಟಿಪ್ಪು ಎಕ್ಸ್ಪ್ರೆಸ್ ಅಂತ ಹೆಸರಿಟ್ಟಿರುವುದು ಯಾಕೆ ಅಂತ ಪ್ರಶ್ನಿಸಿದ ಹಿರಿಯ ಸಾಹಿತಿಗಳು ಆ ಹೆಸರನ್ನು ತೆಗೆದು ಮಹಾರಾಜ ಪ್ರತಾಪ ಸಿಂಗ್ ಅವರ ಹೆಸರಿಡಬೇಕು ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 


TV9 Kannada


Leave a Reply

Your email address will not be published. Required fields are marked *