ಬ್ರೇಕಪ್​ ಬೆನ್ನಲ್ಲೇ ಬ್ರಿಟನ್​ ನಟನ ಜತೆ ಆ್ಯಮಿ ಡೇಟಿಂಗ್​; ಮಗುವಿನ ಜವಾಬ್ದಾರಿ ಯಾರಿಗೆ? | Amy Jackson Dating with Britain Actor Ed Westwick after split with George Panayiotou


ಬ್ರೇಕಪ್​ ಬೆನ್ನಲ್ಲೇ ಬ್ರಿಟನ್​ ನಟನ ಜತೆ ಆ್ಯಮಿ ಡೇಟಿಂಗ್​; ಮಗುವಿನ ಜವಾಬ್ದಾರಿ ಯಾರಿಗೆ?

ಜಾರ್ಜ್​​-ಆ್ಯಮಿ-ಎಡ್​

ಬ್ರಿಟಿಷ್​ ನಟಿ ಆ್ಯಮಿ ಜಾಕ್ಸನ್ (Amy Jackson)​ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಕನ್ನಡದ ‘ದಿ ವಿಲನ್’​ ಸಿನಿಮಾದಲ್ಲಿ ಸುದೀಪ್​ಗೆ (Kichcha Sudeep) ಜತೆಯಾಗಿ ಅವರು ಕಾಣಿಸಿಕೊಂಡಿದ್ದರು. 8 ವರ್ಷಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದ ಅವರು ಸಾಕಷ್ಟು ಹಿಟ್​ ಚಿತ್ರಗಳಲ್ಲಿ ನಟಿಸಿದರು. ಇತ್ತೀಚೆಗೆ ಅವರು ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಬ್ರಿಟಿಷ್​ ಉದ್ಯಮಿ ಜಾರ್ಜ್ ಪನಯೋಟು (George Panayiotou) ಜತೆ ಆ್ಯಮಿ ರಿಲೇಶನ್​ಶಿಪ್​ನಲ್ಲಿದ್ದರು. ಎಂಗೇಜ್​ಮೆಂಟ್ ​ ಕೂಡ ಮಾಡಿಕೊಂಡಿದ್ದರು. ಇವರಿಗೆ ಮಗು ಕೂಡ ಜನಿಸಿತ್ತು. ಆದರೆ, ಕಳೆದ ವರ್ಷ ಇಬ್ಬರೂ ಬೇರೆ ಆಗಿದ್ದಾರೆ ಎಂದು ವರದಿ ಆಗಿತ್ತು. ಈಗ ಆ್ಯಮಿ ಮತ್ತೆ ಡೇಟಿಂಗ್​ ಶುರು ಹಚ್ಚಿಕೊಂಡ ಬಗ್ಗೆ ವರದಿ ಆಗಿದೆ. ​

ಜಾರ್ಜ್ ಪನಯೋಟು ಜತೆ ಆ್ಯಮಿ ರಿಲೇಶನ್​ಶಿಪ್​ನಲ್ಲಿದ್ದರು. ಗರ್ಭಿಣಿ ಆದ  ನಂತರದಲ್ಲಿ ಇಬ್ಬರೂ ಎಂಗೇಜ್​ಮೆಂಟ್​ ಮಾಡಿಕೊಂಡರು. 2019ರಲ್ಲಿ ಆ್ಯಮಿಗೆ ಗಂಡು ಮಗು ಜನಿಸಿತು. ಇದಾದ ನಂತರದಲ್ಲಿ ಆ್ಯಮಿ ಮಗುವಿನ ಜತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. 2021ರಲ್ಲಿ ಆ್ಯಮಿ ಹಾಗೂ ಜಾರ್ಜ್ ಪನಯೋಟು ಬೇರೆ ಆಗಿದ್ದಾರೆ ಎನ್ನಲಾಗಿದೆ. ಜಾರ್ಜ್ ಜತೆ ಇರುವ ಸಾಕಷ್ಟು ಫೋಟೋಗಳು ಆ್ಯಮಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಾರಾಜಿಸಿತ್ತು. ಕಳೆದ ವರ್ಷ ಈ ಫೋಟೋಗಳನ್ನು ಅವರು ಡಿಲೀಟ್​ ಮಾಡಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಆ್ಯಮಿ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಈಗ ಅವರು ಬ್ರಿಟಿಷ್ ನಟನ ಜತೆ ಸುತ್ತಾಟ ನಡೆಸುತ್ತಿರುವ ಬಗ್ಗೆ ವರದಿ ಆಗಿದೆ.

ಬ್ರಿಟನ್​ ನಟ ಎಡ್​ ವೆಸ್ಟ್​ವಿಕ್​ ಜತೆ ಆ್ಯಮಿ ಕಳೆದ ಎರಡು ತಿಂಗಳಿಂದ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ‘ಗಾಸಿಪ್​ ಗರ್ಲ್ಸ್​​’ ಸೀರಿಸ್​ನಲ್ಲಿ ನಟಿಸಿ ಎಡ್​ ಫೇಮಸ್​ ಆಗಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ‘ರೆಡ್​ ಸೀ ಇಂಟರ್​ನ್ಯಾಷನಲ್​ ಫಿಲ್ಮ್​​ ಫೆಸ್ಟಿವಲ್​​’ನಲ್ಲಿ ಆ್ಯಮಿ ಹಾಗೂ ಎಡ್​ ಭೇಟಿ ಆದರು. ಈ ವೇಳೆ ಇಬ್ಬರಿಗೂ ಪರಿಚಯ ಬೆಳೆದಿದ್ದು, ಇಬ್ಬರೂ ಡೇಟಿಂಗ್​ ಶುರು ಹಚ್ಚಿಕೊಂಡಿದ್ದಾರೆ ಎಂದು ‘ಸನ್​ ಆನ್​ ಸಂಡೇ’ ವರದಿ ಮಾಡಿದೆ. ಮಗುವಿನ ಜವಾಬ್ದಾರಿಯನ್ನು ಆ್ಯಮಿ ಅವರೇ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

2010ರಲ್ಲಿ ತೆರೆಗೆ ಬಂದ ತಮಿಳಿನ ‘ಮದ್ರಾಸಪಟ್ಟಿಣಂ​’​ ಸಿನಿಮಾ ಮೂಲಕ ಆ್ಯಮಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಐ’, ‘ಥೆರಿ’ ಅಂಥ ಹಿಟ್​ ಚಿತ್ರಗಳಲ್ಲಿ ಆ್ಯಮಿ ನಟಿಸಿದರು. 2018ರಲ್ಲಿ ತೆರೆಗೆ ಬಂದ ಪ್ರೇಮ್​ ನಿರ್ದೇಶನದ ದಿ ವಿಲನ್​ ಸಿನಿಮಾಗೂ ಆ್ಯಮಿ ನಾಯಕಿಯಾದರು. ಅದೇ ವರ್ಷ ತೆರೆಗೆ ಬಂದ ‘2.0’ ಅವರ ಕೊನೆಯ ಚಿತ್ರ. ಇದಾದ ನಂತರದಲ್ಲಿ ಅವರು ಸಂಸಾರದಲ್ಲಿ ಬ್ಯುಸಿಯಾದರು. ಮತ್ತೆ ಚಿತ್ರರಂಗಕ್ಕೆ ಬರುವ ಇಚ್ಛೆಯನ್ನು ಇತ್ತೀಚೆಗೆ ಅವರು ವ್ಯಕ್ತಪಡಿಸಿದ್ದರು. ಸದ್ಯ, ಆ್ಯಮಿ ಬ್ರಿಟನ್​ನಲ್ಲಿಯೇ ಸೆಟಲ್​ ಆಗಿದ್ದಾರೆ.

TV9 Kannada


Leave a Reply

Your email address will not be published.