ಬ್ರೈನ್ ಡೆಡ್​ ಆದ ತಾಯಿಯ ಅಂಗಾಂಗ ದಾನ ಮಾಡಿ 8 ಜೀವಗಳನ್ನು ಉಳಿಸಿದ ಮಕ್ಕಳು

ಬ್ರೈನ್ ಡೆಡ್​ ಆದ ತಾಯಿಯ ಅಂಗಾಂಗ ದಾನ ಮಾಡಿ 8 ಜೀವಗಳನ್ನು ಉಳಿಸಿದ ಮಕ್ಕಳು

ಉತ್ತರ ಕನ್ನಡ: ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ ಅನ್ನೋ ಗಾದೆ ಮಾತನ್ನ ನಾವೆಲ್ರೂ ಕೇಳಿರ್ತೀವಿ. ಅದೇ ರೀತಿ ಕೆಲವರು ಇದ್ದಾಗಲೂ ಹಲವಾರು ಜನರಿಗೆ ಸಹಾಯ ಮಾಡ್ತಾರೆ. ಹೀಗೆ ಸಾವಿನಲ್ಲೂ ತಮ್ಮ ಜೀವವನ್ನ ಬೇರೆಯವರಿಗೆ ಅರ್ಪಿಸಿ ಕೆಲವರು ತಮ್ಮ ಸಾವನ್ನೂ ಸಾರ್ಥಕ ಪಡಿಸಿಕೊಳ್ತಾರೆ. ಅದೇ ರೀತಿ ಮಹಿಳೆಯೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದು ತಮ್ಮ ಅಂಗಾಂಗ ದಾನ ಮಾಡಿದ್ದಾರೆ..

ರಕ್ಷಂದಾ. ಮೃತ ಮಹಿಳೆಯ ಪುತ್ರಿ

ಜಿಲ್ಲೆಯ ಶಿರಸಿಯ ವಿದ್ಯಾನಗರದ 54 ವರ್ಷದ ಮಹಿಳೆಯೊಬ್ಬರು ಅಕಾಲಿಕ ಮರಣ ಹೊಂದಿದ್ದರೂ 8 ಜನರ ಜೀವ ಉಳಿಸಿದ್ದಾರೆ. ಎರಡು ಮಕ್ಕಳ ತಾಯಿಯಾದ ಸುನಂದ ಸತೀಶ ನಾಯಕ್​ರವರು ಮೆದುಳಿನ ರಕ್ತಸ್ರಾವದಿಂದ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯ ICU ಸೇರಿದ್ರು. ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ತಂದೆಯನ್ನು ಕಳೆದುಕೊಂಡ ಈಕೆಯ ಮಕ್ಕಳು ಇದೀಗ ತಾಯಿಯನ್ನು “ಬ್ರೈನ್ ಡೆಡ್ ” ಮೂಲಕ ಕಳೆದುಕೊಂಡಿದ್ದಾರೆ. ಇಂತಹ ದಾರುಣ ಪರಿಸ್ಥಿತಿಯಲ್ಲೂ ತಾಯಿಯ ಅಂಗಾಂಗಗಳನ್ನ ದಾನ ಮಾಡೋದಕ್ಕೆ ಒಪ್ಪಿಕೊಂಡ ರಕ್ಷಂದಾ ಹಾಗೂ ನಿಶಾಂತ್ ನಾಯ್ಕ್ ರವರು ಮನುಕುಲಕ್ಕೆ ಮಾದರಿಯಾಗಿದ್ದಾರೆ.

ನಿಶಾಂತ್ ನಾಯ್ಕ್, ಮೃತ ಮಹಿಳೆಯ ಪುತ್ರ

The post ಬ್ರೈನ್ ಡೆಡ್​ ಆದ ತಾಯಿಯ ಅಂಗಾಂಗ ದಾನ ಮಾಡಿ 8 ಜೀವಗಳನ್ನು ಉಳಿಸಿದ ಮಕ್ಕಳು appeared first on News First Kannada.

Source: newsfirstlive.com

Source link