ಬೆಂಗಳೂರು: ಕೊರೊನಾ ಹೆಚ್ಚಾದ ಕಾರಣ ಬೆಡ್​ಗೂ, ಆಕ್ಸಿಜನ್​ ಸಿಲಿಂಡರ್​ಗಳಿಗೂ ಬೇಡಿಕೆ ಜಾಸ್ತಿಯಾಗಿದೆ. ಯಾವುದು ಜಾಸ್ತಿಯಿದ್ಯೋ ನಮ್ಮ ಜನ ಅದರಲ್ಲೇ ಅಕ್ರಮವಾಗಿ ದುಡ್ಡು ಮಾಡೋಕೆ ನೋಡ್ತಾರೆ. ಅಂಥವರಲ್ಲಿ ಇದೀಗ ಇನ್ನೂ ಮೂರು ಜನರನ್ನ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.

ಬ್ಲಾಕ್ ಮಾರ್ಕೆಟ್​ನಲ್ಲಿ ಆಕ್ಸಿಜನ್ ಸಿಲಿಂಡರ್​ನ್ನ ಮಾರಾಟ ಮಾಡುತ್ತಿದ್ದ, ಮೂರು ಜನರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್, ರಾಜ್ ಕುಮಾರ್ ಹಾಗೂ ಅನಿಲ್ ಎಂಬುವರನ್ನ ಬಂಧಿಸಿದ ಪೊಲೀಸ್ರು, ಇವರಿಂದ ಅಕ್ಸಿಜನ್ ಸಿಲಿಂಡರ್​ಗಳನ್ನ ವಶಕ್ಕೆ ಪಡೆದಿದ್ದಾರೆ.

The post ಬ್ಲಾಕ್​​ ಮಾರ್ಕೆಟ್​​ನಲ್ಲಿ ಆಕ್ಸಿಜನ್ ಮಾರ್ತಿದ್ದ​ ಖದೀಮರನ್ನ ಬಂಧಿಸಿದ ಸಿಸಿಬಿ ಪೊಲೀಸ್ appeared first on News First Kannada.

Source: newsfirstlive.com

Source link