ಉಡುಪಿ: ಬ್ಲಾಕ್ ಫಂಗಸ್​​ ಸೋಂಕಿನಿಂದ ಬಳಲುತ್ತಿದ್ದ ಸಂತೆಕಟ್ಟೆಯ 76 ವರ್ಷದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ ಅಂತಾ ವರದಿಯಾಗಿದೆ.

ಬ್ಲಾಕ್ ಫಂಗಸ್​ನಿಂದ ಬಳಲುತ್ತಿದ್ದ ವೃದ್ಧೆ.. ಕಳೆದೊಂದು ವಾರದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್‌ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಇಂದು ಚೇತರಿಸಿಕೊಳ್ಳದೇ ಸಾವನ್ನಪ್ಪಿದ್ದಾರೆ.

ಇನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಏಳು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹರಿಹರ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಧಾರವಾಡ ಹಾಗೂ ರಾಣಿಬೆನ್ನೂರು ಜಿಲ್ಲೆಗಳಿಂದ ಬಂದಿದ್ದ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

The post ಬ್ಲಾಕ್​ ಫಂಗಸ್​ಗೆ ಮತ್ತೊಂದು ಬಲಿ, ಉಡುಪಿಯಲ್ಲಿ 76 ವರ್ಷದ ವೃದ್ಧೆ ಸಾವು appeared first on News First Kannada.

Source: newsfirstlive.com

Source link