ಬ್ಲಾಕ್​ ಫಂಗಸ್​ನ ಹಾಟ್​ಸ್ಪಾಟ್ ಆಯ್ತು ಹರಿಯಾಣದ ಗುರುಗ್ರಾಮ

ಬ್ಲಾಕ್​ ಫಂಗಸ್​ನ ಹಾಟ್​ಸ್ಪಾಟ್ ಆಯ್ತು ಹರಿಯಾಣದ ಗುರುಗ್ರಾಮ

ನವದೆಹಲಿ: ಕೊರೊನಾ ಆತಂಕದ ಜೊತೆ ದೇಶದಲ್ಲಿ ಬ್ಲಾಕ್ ಫಂಗಸ್ ಜನರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ. ಗುರುಗ್ರಾಮದಲ್ಲಿ ಸುಮಾರು 50 ಮಂದಿಯಲ್ಲಿ ಬ್ಲಾಕ್ ಫಂಗಸ್​ ಕಾಣಿಸಿಕೊಂಡಿದೆ. ಇನ್ನೂ 50ಕ್ಕೂ ಹೆಚ್ಚು ಜನರು ಬ್ಲಾಕ್ ಫಂಗಸ್​ನಿಂದ ಬಳಲುತ್ತಿರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ ಅಂತಾ ಅಲ್ಲಿನ ಜಿಲ್ಲಾಡಳಿತ ಕಳವಳ ವ್ಯಕ್ತಪಡಿಸಿದೆ.

ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ.. ಕೊರೊನಾ ಸೋಂಕಿನಿಂದ ಬಳಲಿದವರಲ್ಲೇ ಹೆಚ್ಚಾಗಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ತಿದೆ. ಅಲ್ಲದೇ ಕೊರೊನಾದ ಮೊದಲ ಅಲೆಯಲ್ಲಿ ಸೋಂಕಿಗೆ ಒಳಗಾದ ಕೆಲವು ಮಂದಿಯಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ತಿದೆ. ಆದರೆ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾದವರಲ್ಲೇ ಹೆಚ್ಚು ಮಂದಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಳ್ತಿದೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ನಾಲೈದು ದಿನಗಳಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಹೆಚ್ಚಾಗುತ್ತಿರೋ ಹಿನ್ನೆಲಯಲ್ಲಿ ಅದಕ್ಕೆ ಬೇಕಾಗಿರುವ ಅಗತ್ಯ ಔಷಧಿಯನ್ನ ಪೂರೈಸಲು ವಿಶೇಷ ತಜ್ಞರ ಸಮಿತಿಯನ್ನ ರಚನೆ ಮಾಡಲಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

ಗುರುಗ್ರಾಮದ ಮೆಡಿಕಲ್ ಆಫೀಸರ್​ ಡಾ.ವಿರೇಂದ್ರ ಯಾದವ್ ಈ ಬಗ್ಗೆ ಪ್ರತಿಕ್ರಿಯಿಸಿ..ಗುರುಗ್ರಾಮ ಜಿಲ್ಲೆಯಲ್ಲಿ ಒಟ್ಟು 50 ಬ್ಲಾಕ್ ಫಂಗಸ್ ಪ್ರಕರಣ ಅಧಿಕೃತವಾಗಿ ದಾಖಲಾಗಿದೆ. ಬ್ಲಾಕ್ ಫಂಗಸ್ ಬಗ್ಗೆ ಎಲ್ಲಾ ವೈದ್ಯಾಧಿಕಾರಿಗಳೂ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಆದ್ಯತೆ ಮೇರೆಗೆ ಅದಕ್ಕೆ ಚಿಕಿತ್ಸೆ ಮತ್ತು ತಪಾಸಣೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

The post ಬ್ಲಾಕ್​ ಫಂಗಸ್​ನ ಹಾಟ್​ಸ್ಪಾಟ್ ಆಯ್ತು ಹರಿಯಾಣದ ಗುರುಗ್ರಾಮ appeared first on News First Kannada.

Source: newsfirstlive.com

Source link