ಬೆಂಗಳೂರು: ಕೊರೊನಾ ನಡುವೆ ಈಗ ಎಲ್ಲೆಡೆ ಬ್ಲಾಕ್​ ಫಂಗಸ್​ನ ಅಟ್ಟಹಾಸ ಜೋರಾಗಿದೆ. ಈ ಬ್ಲಾಕ್​ಫಂಗಸ್​ ಹೊಡೆದೋಡಿಸಲು ಈಗ ಬಳಸಲಾಗ್ತಿರೋ ಆ್ಯಂಟಿಫಂಗಸ್​ ಔಷಧಿ ಲೈಪೊಸೊಮನ್ ಆ್ಯಂಫೋಟೆರಿಸಿನ್-ಬಿ. ಈ ಔಷಧಿಯನ್ನ ಕಂಡುಹಿಡಿದಿದ್ದು ಕನ್ನಡಿಗ ವಿಜ್ಞಾನಿ ಎಂಬುದು ರಾಜ್ಯಕ್ಕೆ ಹೆಮ್ಮೆಯ ವಿಷಯ.

ಭಾರತ್​ ಸೀರಮ್​, ವ್ಯಾಕ್ಸಿನ್ ​ಲೀ ಕಂಪನಿಯ ವಿಜ್ಞಾನಿ ಬಾಂಡ್ಯ ಶ್ರೀಕಾಂತ್, ಆ್ಯಂಫೋಟೆರಿಸಿನ್-ಬಿ ಮೆಡಿಸನ್ ಕಂಡುಹಿಡಿದವರು. ಉಡುಪಿ ಜಿಲ್ಲೆಯ ಗಂಗೊಳ್ಳಿಯವರಾದ ಶ್ರೀಕಾಂತ್ ಸದ್ಯ, ಮುಂಬೈನಲ್ಲಿ ಸೆಟಲ್​ ಆಗಿದ್ದಾರೆ. 1977ರಲ್ಲಿ ಭಾರತ್ ಸಿರಮ್ ಕಂಪನಿಯನ್ನ ಸೇರಿದ್ದರು.

ಆ್ಯಂಫೋಟೆರಿಸಿನ್-ಬಿ ಇಂಜೆಕ್ಷನ್ ಜೊತೆಗೆ ಇವರು ಅನೇಕ ವ್ಯಾಕ್ಸಿನ್​​ಗಳನ್ನ ಕಂಡುಹಿಡಿದಿದ್ದಾರೆ. ಈ ಮೆಡಿಸನ್​ ಪರಿಶೀಲನೆ ಮಾಡೋ ವೇಳೆ 20ಕ್ಕೂ ಹೆಚ್ಚು ಬಾರಿ ಸುರಕ್ಷತಾ ಪ್ರೋಫೈಲ್ ಮಾಡಲಾಗಿದ್ಯಂತೆ.

The post ಬ್ಲಾಕ್ ಫಂಗಸ್​ಗೆ ಔಷಧಿ ಕಂಡುಹಿಡಿದಿದ್ದು ಇವರೇ, ಕನ್ನಡಿಗ ಶ್ರೀಕಾಂತ್​ ಪೈ appeared first on News First Kannada.

Source: newsfirstlive.com

Source link