ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಬಿದರಕುಂದಿಯ ಗ್ರಾಮ ಪಂಚಾಯತ್ ಸದಸ್ಯ ಸಿದ್ದಲಿಂಗಪ್ಪ ಮಲ್ಲಣ್ಣವರು ಬ್ಲಾಕ್​ ಫಂಗಸ್​ ರೋಗದಿಂದ ಸಾವನ್ನಪ್ಪಿದ್ದಾರೆ.

ಬ್ಲಾಕ್ ಫಂಗಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದಲಿಂಗಪ್ಪ ಮಲ್ಲಣ್ಣವರ ಅವರನ್ನ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಆತಂಕದ ಜೊತೆಗೆ ಬ್ಲಾಕ್​ ಫಂಗಸ್​ನ ಭಯ ಕೂಡ ಶುರುವಾಗಿದೆ. ಇನ್ನು ಜಿಲ್ಲೆಯಲ್ಲಿ ಇದುವರೆಗೆ 36 ಮಂದಿಯನ್ನ ಬ್ಲಾಕ್ ಫಂಗಸ್ ಕಾಡ್ತಿದೆ. ಕೊರೊನಾ ಎರಡನೇ ಅಲೆ ಶುರುವಾದ ಮೇಲೆ ಬ್ಲಾಕ್ ಫಂಗಸ್ ರೋಗ ಕೂಡ ಉಲ್ಬಣಿಸಿದೆ. ಕೊರೊನಾದ ಎರಡನೇ ಅಲೆ ಯಾರೆಲ್ಲಾ ಕಾಡಿದ್ಯೋ ಅಂತವರಲ್ಲಿ ಬ್ಲಾಕ್ ಫಂಗಸ್ ಹೆಚ್ಚಾಗಿ ಕಂಡುಬರುತ್ತಿದೆ.

The post ಬ್ಲಾಕ್ ಫಂಗಸ್​ಗೆ ವಿಜಯಪುರ ಜಿಲ್ಲೆಯ ಗ್ರಾಪಂ ಸದಸ್ಯ ಸಾವು appeared first on News First Kannada.

Source: newsfirstlive.com

Source link