ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾದ ಬೆನ್ನಲ್ಲೇ ರೆಮ್ಡಿಸಿವಿರ್ ಔಷಧಿಗೆ ಭಾರೀ ಬೇಡಿಕೆ ಬಂದಿದೆ. ಆದ್ರೆ ಖರೀದಿಸಲು ಮುಂದಾದ್ರೆ ಔಷಧಿಯ ಕೊರತೆಯೂ ಎದುರಾಗಿದೆ. ಹಾಗಂತ ನೀವೇನಾದ್ರೂ ಬ್ಲಾಕ್ ಮಾರ್ಕೆಟ್​ನಲ್ಲಿ ರೆಮ್ಡಿಸಿವಿರ್ ಸಿಗುತ್ತೆ ಅಂತಾ ಖರೀದಿಸೋಕೆ ಮುಂದಾದ್ರೆ ಹುಷಾರ್.. ಯಾಕಂದ್ರೆ ಬ್ಲಾಕ್​ ಮಾರ್ಕೆಟ್​​ನಲ್ಲಿ ನಕಲಿ ರೆಮ್ಡಿಸಿವಿರ್ ಮಾರಾಟ ಮಾಡಲಾಗ್ತಿದೆ.

ರೆಮ್ಡಿಸಿವಿರ್ ಕೊರತೆ ಎದುರಾದ ಬೆನ್ನಲ್ಲೇ ಕಾಳಸಂತೆಯಲ್ಲಿ ಖದೀಮರು ನಕಲಿ ಔಷಧಿಗಳನ್ನ ರೆಮ್ಡಿಸಿವಿರ್ ಹೆಸರಿನಲ್ಲಿ ಮಾರಾಟ ಮಾಡೋಕೆ ಮುಂದಾಗಿದ್ದಾರೆ. ನಕಲಿ ಔಷಧಿಗೂ ಇಂಜೆಕ್ಷನ್​ಗೆ 20 ರಿಂದ 30 ಸಾವಿರ ಬೆಲೆ ಕಟ್ಟಿದ್ದಾರೆ.

ಬೆಲೆ ಎಷ್ಟಾದರಾಗಲಿ ಅಂತ ಈ ನಕಲಿ ಔಷಧಿ ಖರೀದಿಸಿದ್ರೆ ಹುಷಾರ್.. ಯಾಕಂದ್ರೆ ಈ ನಕಲಿ ಔಷಧಿ ನೀಡಿದ್ರೆ ಪೇಶೆಂಟ್ ಬದುಕೋ ಚಾನ್ಸ್ ಬಹಳ ಕಡಿಮೆ ಎನ್ನಲಾಗ್ತಿದೆ. ಇಂಥ ನಕಲಿ ಔಷಧಿ ಮಾರೋ ಜಾಲವೇ ಬೆಂಗಳೂರಿನಲ್ಲಿ ತಲೆ ಎತ್ತಿದ್ದು ಪೊಲೀಸರು ಇವರ ಬೆನ್ನು ಹತ್ತಿದ್ದಾರೆ. ಈಗಾಗ್ಲೇ ನಕಲಿ ಔಷಧಿ ಮಾರಾಟ ಮಾಡ್ತಿದ್ದ ಕೆಲವರನ್ನ ಬಂಧಿಸಿರುವ ಬಗ್ಗೆ ವರದಿಗಳೂ ಆಗಿವೆ.

The post ಬ್ಲಾಕ್ ಮಾರ್ಕೆಟ್​ನಲ್ಲಿ ಸಿಗ್ತಿದೆ ನಕಲಿ ರೆಮ್ಡಿಸಿವಿರ್.. ಈ ಔಷಧಿ ತಗೊಂಡ್ರೆ ಜೀವಕ್ಕೇ ಆಪತ್ತು.. ಹುಷಾರ್ appeared first on News First Kannada.

Source: newsfirstlive.com

Source link