ಬೆಂಗಳೂರು: ಮಾಜಿ ಸಚಿವರ ಖಾಸಗಿ CD ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ನೀಡಿರುವ ಬ್ಲಾಕ್ ಮೇಲ್ ದೂರು ರದ್ದತಿಗೆ ಕೋರಿದ್ದ ಅರ್ಜಿಯ ವಿಚಾರಣೆಯನ್ನ ಹೈಕೋರ್ಟ್​ ಜೂನ್ 23ಕ್ಕೆ ಮುಂದೂಡಿಕೆ ಮಾಡಿದೆ.

ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಪೀಠಕ್ಕೆ ಅರ್ಜಿ ಬಂದಿತ್ತು. ಈ ಅರ್ಜಿ ಜನಪ್ರತಿನಿಧಗಳ ವಿರುದ್ಧದ ಪೀಠ, ನ್ಯಾ.ಸುನಿಲ್ ದತ್ ಯಾದವ್ ಪೀಠಕ್ಕೆ ಬರಬೇಕಿತ್ತು. ಹೀಗಾಗಿ ಜನಪ್ರತಿನಿಧಿಗಳ ವಿರುದ್ಧದ ಪೀಠಕ್ಕೆ ಅರ್ಜಿಯನ್ನ ಕೋರ್ಟ್​ ವರ್ಗಾಯಿಸಿತು.

ರಮೇಶ್ ಜಾರಕಿಹೊಳಿ ಕೊಟ್ಟ ದೂರು ರದ್ದು ಅರ್ಜಿ ವಿಚಾರ ಸಂಬಂಧಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಇಂದು ನೋಟಿಸ್ ಸ್ವೀಕಾರ ಮಾಡಿದ್ದಾರೆ. ಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸದಾಶಿವ ನಗರ ಮನೆಯಲ್ಲಿ ನೋಟಿಸ್ ಸ್ವೀಕಾರ ಮಾಡಿದ್ದಾರೆ. ಕಳೆದ ವಿಚಾರಣೆ ಸುನಿಲ್ ದತ್ ಯಾದವ್ ಪೀಠದಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ಬೈ ಹ್ಯಾಂಡ್ ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಿತ್ತು. ಇದನ್ನ ರಮೇಶ್ ಸ್ವೀಕಾರ ‌ಮಾಡಿಲ್ಲವೆಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು ಅಂತಾ ನ್ಯೂಸ್​ಫಸ್ಟ್​ಗೆ ಅರ್ಜಿದಾರರ ಪರ ವಕೀಲ ಸಂಕೇತ ಏಣಗಿ ಮಾಹಿತಿ ನೀಡಿದ್ದಾರೆ.

The post ಬ್ಲಾಕ್ ಮೇಲ್ ದೂರು ರದ್ದತಿಗೆ ಕೋರಿದ್ದ ಅರ್ಜಿ; ನೋಟಿಸ್ ಸ್ವೀಕರಿಸಿದ ರಮೇಶ್ ಜಾರಕಿಹೊಳಿ appeared first on News First Kannada.

Source: newsfirstlive.com

Source link