ಬ್ಲೂಪ್ರಿಂಟ್ ರೆಡಿ: ಅಂಜನಾದ್ರಿಯನ್ನು ನಾವು ಅಭಿವೃದ್ಧಿ ಮಾಡೇ ಮಾಡ್ತೀವಿ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ | BJP government will develop hanuma birth place in anjanadri hill in koppal says tourism minister anand singh


ಬ್ಲೂಪ್ರಿಂಟ್ ರೆಡಿ: ಅಂಜನಾದ್ರಿಯನ್ನು ನಾವು ಅಭಿವೃದ್ಧಿ ಮಾಡೇ ಮಾಡ್ತೀವಿ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್

ಅಂಜನಾದ್ರಿಯನ್ನು ನಾವು ಅಭಿವೃದ್ಧಿ ಮಾಡೇ ಮಾಡ್ತೀವಿ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್

anjanadri hill: ಆಂಜನೇಯ ಶೂದ್ರ ಅದಕ್ಕೆ ಬಿಜೆಪಿಯವರು ಅಭಿವೃದ್ಧಿ ಮಾಡ್ತಿಲ್ಲ ಅನ್ನೋ ಮಾಜಿ ಸಂಸದ ಉಗ್ರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಆನಂದ್ ಸಿಂಗ್ ನನಗೆ ಜಾತಿ ಅದ್ಯಾವುದೂ ಗೊತ್ತಿಲ್ಲ. ನಾವು 100 ಕ್ಕೆ ನೂರು ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡ್ತೀವಿ. ಈಗಾಗಲೇ ಬ್ಲೂಪ್ರಿಂಟ್ ರೆಡಿ ಆಗಿದೆ ಎಂದರು.

ಕೊಪ್ಪಳ: ಹನುಮನ ಜನ್ಮಸ್ಥಳ ಅಂಜನಾದ್ರಿಯನ್ನು (anjanadri hill) ನಾವು ಅಭಿವೃದ್ಧಿ ಮಾಡೇ ಮಾಡ್ತೀವಿ ಎಂದು ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (tourism minister anand singh) ಖಡಕ್ಕಾಗಿ ಹೇಳಿದ್ದಾರೆ.

ಆಂಜನೇಯ ಶೂದ್ರ ಅದಕ್ಕೆ ಬಿಜೆಪಿಯವರು ಅಭಿವೃದ್ಧಿ ಮಾಡ್ತಿಲ್ಲ ಅನ್ನೋ ಮಾಜಿ ಸಂಸದ ಉಗ್ರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಆನಂದ್ ಸಿಂಗ್ ನನಗೆ ಜಾತಿ ಅದ್ಯಾವುದೂ ಗೊತ್ತಿಲ್ಲ. ನಾವು 100 ಕ್ಕೆ ನೂರು ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡ್ತೀವಿ. ಈಗಾಗಲೇ ಬ್ಲೂಪ್ರಿಂಟ್ ರೆಡಿ ಆಗಿದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಅವಹೇಳನ ಆರೋಪ; ಕಾಂಗ್ರೆಸ್‌ನ ಐಟಿ ಸೆಲ್‌ನ ಕಾರ್ಯದರ್ಶಿ ವಿರುದ್ಧ ದೂರು

ಕಾಂಗ್ರೆಸ್ ನವರು ನಮಗೆ ಬೇಗಾ ಮಾಡಲಿ ಎಂದು ಪ್ರಚೋದನೆ ಮಾಡ್ತೀದಾರೆ ಎಂದ ಅನಂದ್ ಸಿಂಗ್‌ ನಮ್ಮ ಮನೆಯಲ್ಲೂ ದೇವರು ಇದಾರೆ, ನಿಮ್ಮ ಮನೆಯಲ್ಲಿ ಇರೋ ದೇವರು ಅವರೇ. ನಮ್ಮ ಮನೆಯಲಿ ದೇವರ ಇಲ್ಲ, ನಿಮ್ಮ ಮನೆಯಲಿ ಇಡಬೇಡಾ ಅಂತಾ ಹೇಳೋಕೆ ಆಗುತ್ತಾ? ಅದೆಲ್ಲ ನಂಬಿಕೆ ಎಂದ ಆನಂದ್ ಸಿಂಗ್, ಹನುಮನ ಜನ್ಮಸ್ಥಳದ ಬಗೆಗಿನ ಬೇರೆ ರಾಜ್ಯಗಳ ಖ್ಯಾತೆಗೆ ಮಾರ್ಮಿಕ ಉತ್ತರ ನೀಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

TV9 Kannada


Leave a Reply

Your email address will not be published.