ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ತಮಗೆ ವೈಎಸ್ಆರ್ ಕಾಂಗ್ರೆಸ್ನವರು ತೀವ್ರ ಅವಮಾನ ಮಾಡಿದ್ದಾರೆ. ಪುನಃ ನಾನು ಅಧಿಕಾರ ಹಿಡಿದೇ ವಿಧಾನಸೌಧ ಪ್ರವೇಶ ಮಾಡುತ್ತೇನೆ ಅಂತ ಕಣ್ಣೀರು ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ರೋಜಾ, ಚಂದ್ರಬಾಬು ನಾಯ್ಡು ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಬು ಇಂದು ನಿನಗೆ ಯಾವ ಪರಿಸ್ಥಿತಿ ಬಂದಿದೆಯೋ ಅದು ನಿನ್ನ ಕರ್ಮದ ಫಲ. ಅದನ್ನು ನೀನು ಅನುಭವಿಸಲೇಬೇಕು ಎಂದರು.
ಇಂದು ಯಾರೋ ಏನೋ ಅಂದ್ರು ಅಂತ ನೀನು ಕಣ್ಣೀರು ಹಾಕಿದರೇ, ಜನ ನಿನ್ನನ್ನು ನಂಬಲು ತಯಾರಿಲ್ಲ. ಇಂದಿನ ನಿನ್ನ ಪರಿಸ್ಥಿತಿ ನೋಡಿ ನನಗೆ ತುಂಬಾ ಖುಷಿಯಾಗಿದೆ. ಯಾಕಂದ್ರೆ ಹೈದರಾಬಾದ್ ವಿಧಾನಸಭೆಯಲ್ಲಿ ನೀನು ನಂಗೆ ಏನು ಮಾಡಿದೆ ಎನ್ನುವುದು ನೆನಪಿದೆಯೇ? ಒಬ್ಬ ಮಹಿಳೆ ಎನ್ನುವುದನ್ನೂ ಮರೆತು, ಬ್ಲೂ ಫಿಲಂನಲ್ಲಿ ನಟಿಸಿದ್ದಾಳೆ ಎಂದು ಅವಮಾನಿಸಿದೆ ಅಂತ ರೋಜಾ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಜಯಲಲಿತಾ ಮಾಡಿದ್ದ ಶಪಥ ನೆನಪಿಸಿತು ನಾಯ್ಡು ಕಣ್ಣೀರು; ಜಗನ್ ವಿರುದ್ಧ ತೊಡೆ ತಟ್ಟಲು ಕಾರಣ ಏನು ಗೊತ್ತಾ..?