ನವದೆಹಲಿ: ಇಂದು 43ನೇ ಜಿಎಸ್​​ಟಿ ಕೌನ್ಸಿಲ್​​ ಸಭೆ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಂತರ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬ್ಲ್ಯಾಕ್​ ಫಂಗಸ್​ಗೆ ನೀಡಲಾಗುವ ಔಷಧಿ ಎಂಫೋಟೆರಿಸಿನ್​​-ಬಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದರು.

ಅಲ್ಲದೇ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬಾಕಿ ಶುಲ್ಕ ಕಡಿತ ಮಾಡಲಾಗಿದೆ. ಶುಲ್ಕ ವಿನಾಯಿತಿಯೊಂದಿಗೆ ಬಾಕಿ ತೆರಿಗೆ ಪಾವತಿ ಮಾಡಬಹುದು. ಇನ್ನು ಕೋವಿಡ್​ ಉಪಕರಣಗಳಿಗೆ ತಾತ್ಕಾಲಿಕ ಜಿಎಸ್​ಟಿ ವಿನಾಯಿತಿ ನೀಡಲಾಗಿದೆ. ಆಗಸ್ಟ್‌​ 31ರವರೆಗೆ ಕೋವಿಡ್​​ ಉಪಕರಣಗಳಿಗೆ ವಿನಾಯಿತಿ ಇರಲಿದೆ. 2 ಲಸಿಕೆ ತಯಾರಕರಿಗೆ 4,500 ಕೋಟಿ ಮುಂಗಡ ಪಾವತಿ ಮಾಡಲಾಗಿದೆ. GST ಕಾಯ್ದೆ ತಿದ್ದುಪಡಿ ಮಾಡಲು ಕೌನ್ಸಿಲ್ ಶಿಫಾರಸು ನೀಡಿದೆ ಎಂದು ಹೇಳಿದರು.

The post ಬ್ಲ್ಯಾಕ್​ ಫಂಗಸ್​ಗೆ ನೀಡುವ ಆ್ಯಂಫೊಟೆರಿಸಿನ್​​-ಬಿ ಔಷಧಿಗೆ ಜಿಎಸ್​ಟಿಯಿಂದ ವಿನಾಯಿತಿ appeared first on News First Kannada.

Source: newsfirstlive.com

Source link