ಬ್ಲ್ಯಾಕ್​ ಫಂಗಸ್​ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ರೀ ಚಿಕಿತ್ಸೆ..? ಹೈಕೋರ್ಟ್ ಹೇಳಿದ್ದೇನು..?

ಬ್ಲ್ಯಾಕ್​ ಫಂಗಸ್​ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ರೀ ಚಿಕಿತ್ಸೆ..? ಹೈಕೋರ್ಟ್ ಹೇಳಿದ್ದೇನು..?

ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್​ಗೆ ಸೂಕ್ತ ಚಿಕಿತ್ಸೆ ನೀಡುವ ವಿಚಾರವಾಗಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಕಳೆದೊಂದು ವಾರದಲ್ಲಿ 600 ಹೊಸ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಒಟ್ಟು 2,817 ಬ್ಲಾಕ್ ಫಂಗಸ್ ಕೇಸ್ ಪತ್ತೆಯಾಗಿವೆ.. ಮ್ಯುಕೊರ್ಮೈಕೋಸಿಸ್ ನಿಂದಾಗಿ ಸಾವಿನ ಪ್ರಮಾಣವೂ ಹೆಚ್ಚಿದೆ. ಮ್ಯುಕೊರ್ಮೈಕೋಸಿಸ್ ಚಿಕಿತ್ಸೆಗೆ ಬೆಡ್ ಮೀಸಲಿಡಬೇಕು.. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಬೇಕು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿದೆ.

ವಾದ ಪ್ರತಿವಾದ:
ಕೋವಿಡ್ ಬ್ಲಾಕ್ ಫಂಗಸ್ ಬಗ್ಗೆ ರಾಜ್ಯ ಸರ್ಕಾರದಿಂದ ಎಲ್ಲಾ ಆಸ್ಪತ್ರೆಗಳಿಗೆ ಮಾರ್ಗಸೂಚಿ ನೀಡಲಾಗಿದೆ.. ಐಸಿಎಂಆರ್​ನ ಮಾರ್ಗಸೂಚಿಗಳ ಮಾಡಿಫೈಡ್ ಮಾಡಿ ಬಿಡುಗಡೆ ಮಾಡಲಾಗಿದೆ. 2,817 ಕೇಸ್ ಸದ್ಯ ರಾಜ್ಯದಲ್ಲಿ‌ ಬ್ಲ್ಯಾಕ್​ ಫಂಗಸ್ ಪಾಸಿಟಿವ್ ಇದ್ದಾರೆ. ಅದರಲ್ಲಿ 2,304 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 190 ಕ್ಕೂ ಹೆಚ್ಚು ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ಬ್ಲಾಕ್ ಫಂಗಸ್ ಔಷಧಿಗೆ ರಾಜ್ಯದಲ್ಲಿ ಸದ್ಯ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ಹೈಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಬಿಲ್ ಆಗ್ತಿದೆ.. ಓರ್ವ ರೋಗಿ 11 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಕೇಸ್ ಸ್ಟಡಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ರೀತಿ ಕೇಸ್​ಗಳಲ್ಲಿ ರಾಜ್ಯ ಸರ್ಕಾರ ಉಚಿತ ಚಿಕಿತ್ಸೆ ನೀಡುವಲ್ಲಿ‌ ಕ್ರಮ ತೆಗೆದುಕೊಳ್ಳಬೇಕು.. ಇದನ್ನ ಕಂಟ್ರೋಲ್ ಮಾಡಲು ರಾಜ್ಯ ಸರ್ಕಾರ & ಬಿಬಿಎಂಪಿ ‌ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಕೊವೀಡ್ ಪಾಸಿಟಿವ್ ಆದವರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಬೇಕು.. ಅವರಿಗೆ ಮುಂಜಾಗೃತೆ ತೆಗೆದುಕೊಳ್ಳಲು ಜಾಗೃತಿ ಮೂಡಿಸಬೇಕು.. ಮಾಡಬೇಕಾದ, ಮಾಡಬಾರದ ಅಂಶಗಳ ಪಟ್ಟಿ ತಲುಪಿಸಿ. ತೆಗೆದುಕೊಂಡ ಕ್ರಮದ ಬಗ್ಗೆ ರಾಜ್ಯ ಸರ್ಕಾರ ಮುಂದಿನ ವಿಚಾರಣೆ ವೇಳೆ ಹೇಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ಸೂಚನೆ ನೀಡಿತು.

The post ಬ್ಲ್ಯಾಕ್​ ಫಂಗಸ್​ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ರೀ ಚಿಕಿತ್ಸೆ..? ಹೈಕೋರ್ಟ್ ಹೇಳಿದ್ದೇನು..? appeared first on News First Kannada.

Source: newsfirstlive.com

Source link