ಥಾಣೆ: ಮಾರಕ ಕೊರೊನಾ ಸೋಂಕಿನ ಅಬ್ಬರಕ್ಕೆ ತತ್ತರಿಸಿ ಹೋಗುತ್ತಿರುವ ಜನತೆಗೆ ಮ್ಯೂಕೋರ್​ಮೈಕೋಸಿಸ್​/ಬ್ಲಾಕ್ ಫಂಗಸ್ ಮತ್ತೊಂದು ಹೊಡೆತ ನೀಡಿದೆ. ದೇಶದಲ್ಲಿ ಬ್ಲಾಕ್‌ ಫಂಗಸ್‌ ಇನ್​ಫೆಕ್ಷನ್​​ನಿಂದ ಕೊರೊನಾ ರೋಗಿಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಏನಿದು ಕಪ್ಪು ಫಂಗಸ್​? ಇದನ್ನೂ ಓದಿ: ಕೊರೊನಾದಿಂದ ಗುಣವಾದವರಿಗೆ ಅದಕ್ಕಿಂತ ಭೀಕರ ಕಪ್ಪು ಫಂಗಸ್ ಕಾಟ; ಪ್ರಾಣಕ್ಕೂ ಕುತ್ತು-ಕಣ್ಣಿಗೂ ಕುರುಡು

ಮಹಾರಾಷ್ಟ್ರದ ಥಾಣೆಯಲ್ಲಿ ಇಬ್ಬರು ಕೊರೊನಾ ರೋಗಿಗಳು ಕಪ್ಪು ಫಂಗಸ್​ ಇನ್​ಫೆಕ್ಷನ್​ನಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ 6 ಮಂದಿ ಈ ಇನ್​ಫೆಕ್ಷನ್​​ಗೆ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಇಬ್ಬರನ್ನ ಐಸಿಯುನಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಬಿಹಾರದ ಕೈಮೂರ್‌ನಲ್ಲಿ 58 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿ ಪಾಟ್ನಾದ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅವರು ಸಾವನ್ನಪ್ಪಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಅವರಲ್ಲಿ ಕೂಡ ಬ್ಲಾಕ್‌ ಫಂಗಸ್‌ ಇನ್​ಫೆಕ್ಷನ್​​/ಮ್ಯೂಕೋರ್​​ಮೈಕೋಸಿಸ್​​ನ ಲಕ್ಷಣಗಳು ಕಂಡುಬಂದಿತ್ತು ಅಂತ ತಿಳಿಸಿದ್ದಾರೆ.

ವ್ಯಕ್ತಿಯ ಕಣ್ಣು ಹಾಗೂ ಮೂಗಿನಲ್ಲಿ ಮ್ಯೂಕೋರ್​ನಂತ ಅಂಶ ಕಾಣಿಸಿತ್ತು. ನಾವು ಫಂಗಲ್​ ಕಲ್ಚರ್​​ಗಾಗಿ ಅವರ ಸ್ಯಾಂಪಲ್​ಗಳನ್ನ ಕಳುಹಿಸಿದ್ದೆವು. ಆದ್ರೆ ಮ್ಯೂಕೋರ್​ಮೈಕೋಸಿಸ್ ಉಂಟಾಗಿತ್ತು ಎಂಬುದನ್ನ ಖಚಿತಪಡಿಸಲು ಮೆದುಳಿನ ಎಂಆರ್​ಐ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಪಾಟ್ನಾದ ಏಮ್ಸ್​ನ ಹೆಚ್ಚುವರಿ ಪ್ರಾಧ್ಯಾಪಕ ಮತ್ತು ಇಎನ್​ಟಿ ವಿಭಾಗದ ಮುಖ್ಯಸ್ಥ ಡಾ. ಕ್ರಾಂತಿ ಭಾವನಾ ಹೇಳಿದ್ದಾರೆ.

ಕಳೆದ ಒಂದು ವಾರದಲ್ಲಿ ಬಿಹಾರದಲ್ಲಿ ಎಂಟು ಮ್ಯೂಕೋಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಏಳು ಕೇಸ್​ ಪಾಟ್ನಾ ಏಮ್ಸ್​ನಲ್ಲಿ ಮತ್ತು ಒಂದು ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಕಪ್ಪು ಫಂಗಲ್ ಇನ್​ಫೆಕ್ಷನ್​ ಚಿಕಿತ್ಸೆಗೆ ದಿನಕ್ಕೆ 15-20 ಸಾವಿರ ಖರ್ಚು; ಅದಕ್ಕೇ ಹೇಳ್ತಿರೋದು ಎಚ್ಚರ ಎಚ್ಚರ 

The post ಬ್ಲ್ಯಾಕ್‌ ಫಂಗಸ್‌ ಇನ್​ಫೆಕ್ಷನ್​​​ನಿಂದ ಥಾಣೆಯಲ್ಲಿ ಇಬ್ಬರು ಕೊರೊನಾ ರೋಗಿಗಳ ಸಾವು appeared first on News First Kannada.

Source: newsfirstlive.com

Source link