ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕಿನ ಸಾಂಕ್ರಾಮಿಕ ಒಂದೆಡೆಯಾದರೆ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್​ಮೈಕೋಸಿಸ್ ಕಾಯಿಲೆಯ ಕಾಟ ಮತ್ತೊಂದೆಡೆಯಾಗಿದೆ.

ದೇಶದಾದ್ಯಂತ ಈಗಾಗಲೇ ಹಲವು ರಾಜ್ಯಗಳಲ್ಲಿ ಈ ಬ್ಲ್ಯಾಕ್ ಫಂಗಸ್ ಕಾಯಿಲೆ ಹೆಚ್ಚಾಗುತ್ತಿದ್ದು ಇಂದು ದೆಹಲಿಯಲ್ಲೂ ಸಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜಸ್ಥಾನದಲ್ಲೂ ಸಹ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್​ಮೈಕೋಸಿಸ್ ಪ್ರಕರಣಗಳು ಹೆಚ್ಚಾಗಿದ್ದು ಇದನ್ನು ಸಾಂಕ್ರಾಮಿಕ ರೋಗವೆಂದು ಅಲ್ಲಿನ ಸರ್ಕಾರ ಘೋಷಿಸಿದೆ.

ಸದ್ಯ ರಾಜಸ್ಥಾನದಲ್ಲಿ 100 ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು ಜೈಪುರದ ಸವಾಯಿ ಮನ್ ಸಿಂಗ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಈ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅಲ್ಲಿನ ಆರೋಗ್ಯ ಸಚಿವಾಲಯ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಲಿಪೊಸೊಮಲ್ ಆ್ಯಂಫೊಟೆರಿಸಿನ್ ಬಿ ​ ಔಷಧಿ 2,500 ವಯಲ್ಸ್​​ಗಳನ್ನ ಪೂರೈಸುವಂತೆ ಭಾರತ್ ಸೀರಮ್ಸ್ ಅಂಡ್ ವ್ಯಾಕ್ಸಿನ್ ಲಿಮಿಟೆಡ್​ಗೆ ಬೇಡಿಕೆ ಇಟ್ಟಿದೆ.

The post ಬ್ಲ್ಯಾಕ್ ಫಂಗಸ್​ ಕಾಯಿಲೆಯನ್ನ ಸಾಂಕ್ರಾಮಿಕ ಎಂದು ಘೋಷಿಸಿದ ರಾಜಸ್ಥಾನ appeared first on News First Kannada.

Source: newsfirstlive.com

Source link