ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಸದ್ಯ ಭಾರೀ ಆತಂಕ ಸೃಷ್ಟಿಸಿದೆ. ಬ್ಲ್ಯಾಕ್​ ಫಂಗಸ್​ನ ಚಿಕಿತ್ಸೆಯೂ ದುಬಾರಿ ಎನ್ನುವುದು ಜನರ ಆತಂಕಕ್ಕೆ ಮತ್ತೊಂದು ಕಾರಣ. ಆದ್ರೆ ಇದೀಗ ಹೈದರಾಬಾದ್​ನ ಇಂಡಿಯನ್ ಇನ್ಸ್​ಟಿಟ್ಯೂಟ್ ಟೆಕ್ನಾಲಜಿ ಇದಕ್ಕೊಂದು ಪರಿಹಾರವನ್ನ ಕಂಡುಹಿಡಿದಿರೋದಾಗಿ ಘೋಷಿಸಿದೆ.

ಇಂಡಿಯನ್ ಇನ್ಸ್​ಟಿಟ್ಯೂಟ್ ಟೆಕ್ನಾಲಜಿ, ಹೈದರಾಬಾದ್​ ಸದ್ಯ ಮಾತ್ರೆಯೊಂದನ್ನ ಅಭಿವೃದ್ಧಿಪಡಿಸಿದೆ. ಈ ಮಾತ್ರೆ 60 mg ಟ್ಯಾಬ್ಲೆಟ್ ಆಗಿದ್ದು 200 ರೂಪಾಯಿಗೆ ಲಭ್ಯವಾಗಲಿದೆಯಂತೆ. ಅಲ್ಲದೇ ಪೇಶೆಂಟ್ ಫ್ರೆಂಡ್ಲಿಯೂ ಆಗಿದೆ ಎನ್ನಲಾಗಿದೆ.

ಸದ್ಯ ಟ್ಯಾಬ್ಲೆಟ್​​ ಅಭಿವೃದ್ಧಿಪಡಿಸಿರುವ ಐಐಟಿ ಮಾತ್ರೆ ತಯಾರಿಗಾಗಿ ಪ್ರಾಯೋಗಿಕ ಹಂತಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಉತ್ಪಾದಕ ಫಾರ್ಮಾ ಪಾರ್ಟ್ನರ್​​​​ಗಳಿಗೆ ಕಳುಹಿಸಲಿದೆ ಎನ್ನಲಾಗಿದೆ.

The post ಬ್ಲ್ಯಾಕ್ ಫಂಗಸ್​ ಚಿಕಿತ್ಸೆಗೆ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ ಹೈದರಾಬಾದ್ ಐಐಟಿ.. ಏನಿದರ ವಿಶೇಷತೆ..? appeared first on News First Kannada.

Source: newsfirstlive.com

Source link