ಕೊರೊನಾ ಸೋಂಕಿನಿಂದ ಗುಣಮುಖರಾದ ಕೆಲವರಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕೊರೊನಾದಿಂದ ಗುಣಮುಖನಾದ 80 ವರ್ಷದ ವೃದ್ಧನೋರ್ವ ಬ್ಲ್ಗ್ಯಾಕ್ ಫಂಗಸ್ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.

ಕೊರೊನಾದಿಂದ ಗುಣಮುಖನಾಗಿದ್ದ ವೃದ್ಧನ ಬಾಯಿಯಲ್ಲಿ ಹುಣ್ಣಾಗಿತ್ತು ಎನ್ನಲಾಗಿದೆ. ಇದು ಬ್ಲ್ಯಾಕ್​ ಫಂಗಸ್​ನ ಗುಣಲಕ್ಷಣ ಎಂದು ಆತಂಕಕ್ಕೊಳಗಾದ ವೃದ್ಧ ತನ್ನ ಮನೆಯ ಟೆರೇಸ್​ ಮೇಲೆ ಇಟ್ಟಿದ್ದ ಕೀಟನಾಶಕ ಕುಡಿದಿದ್ದಾರೆ. ತಕ್ಷಣ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇನ್ನು ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ವೃದ್ಧ ತನ್ನ ಡೆತ್​ನೋಟ್​ನಲ್ಲಿ ತನಗೆ ಫಂಗಸ್ ರೋಗ ಬಂದಿರುವ ಶಂಕೆಯಿದ್ದು ಇನ್ನು ಮುಂದೆ ರೋಗದಿಂದ ಬಳಲಲಾರೆ ಎಂದು ಬರೆದುಕೊಂಡಿದ್ದ. ಆ ವೃದ್ಧ ಕೊರೊನಾ ಸೋಂಕಿನಿಂದ ಬಳಲಿದ ಮತ್ತು ಡಯಾಬಿಟಿಸ್ ಇರುವವರಲ್ಲಿ ಬ್ಲ್ಯಾಕ್ ಫಂಗಸ್ ಬರುತ್ತದೆಂದು ಹೆದರಿದ್ದ. ಇದಕ್ಕೆ ಚಿಕಿತ್ಸೆ ನೀಡದರೂ ವಾಸಿಯಾಗುವುದಿಲ್ಲ.. ಇದರಿಂದ ಭವಿಷ್ಯದಲ್ಲಿ ನರಳಬೇಕಾಗುತ್ತದೆ ಎಂದು ಆತಂಕಗೊಂಡಿದ್ದ ಎಂದು ಪೊಲೀಸ್ ಇನ್ಸ್​ಪೆಕ್ಟರ್ ಜೆ ಎಂ ಸೋಲಂಕಿ ಹೇಳಿಕೆ ನೀಡಿದ್ದಾರೆ. ಇನ್ನು ಸಾವನ್ನಪ್ಪಿದ ವೃದ್ಧ ಆರ್ಥಿಕವಾಗಿ ಬಲವಾಗಿದ್ದರೂ ಮಾನಸಿಕವಾಗಿ ಅಷ್ಟು ಗಟ್ಟಿಯಿರಲಿಲ್ಲ ಎನ್ನಲಾಗಿದೆ.

The post ಬ್ಲ್ಯಾಕ್ ಫಂಗಸ್​ ಭೀತಿಯಿಂದ ಟೆರೇಸ್​ ಮೇಲೆ ಕೀಟನಾಶಕ ಕುಡಿದು ಮೃತಪಟ್ಟ 80ರ ವೃದ್ಧ appeared first on News First Kannada.

Source: newsfirstlive.com

Source link