ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್​ನ ಉಪಟಳ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆಯಾಗುತ್ತಿದ್ದು ಕೇಂದ್ರ ಸರ್ಕಾರ ಇದೀಗ ಕೊರೊನಾ ಜೊತೆಗೆ ಬ್ಲ್ಯಾಕ್ ಫಂಗಸ್ ವಿರುದ್ಧವೂ ಹೋರಾಟ ಆರಂಭಿಸಿದೆ.

ಕೇಂದ್ರ ಸರ್ಕಾರ ಇಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬ್ಲ್ಯಾಕ್​ ಫಂಗಸ್ ಚಿಕಿತ್ಸೆಗೆ ಬಳಸಲಾಗುವ ಲಿಪೊಸೊಮಲ್ ಆ್ಯಂಫೊಟೆರಿಸಿನ್- ಬಿ ಔಷಧಿಗಳನ್ನ ಹಂಚಿಕೆ ಮಾಡಿದೆ. ಒಟ್ಟು 80,000 ವಯಲ್ಸ್ ಆ್ಯಂಫೊಟೆರಿಸಿನ್- ಬಿ ಔಷಧಿಗಳನ್ನ ಹಂಚಿಕೆ ಮಾಡಲಾಗಿದ್ದು ಈ ಪೈಕಿ ಕರ್ನಾಟಕಕ್ಕೆ 5,190 ವಯಲ್ಸ್​ಗಳನ್ನ ಹಂಚಿಕೆ ಮಾಡಲಾಗಿದೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಕೇಂದ್ರ ಸಚಿವ ಸದಾನಂದ ಗೌಡ.. ಇಂದು ರಾಜ್ಯಕ್ಕೆ 5,190 ವಯಲ್ಸ್ ಆ್ಯಂಫೊಟೆರಿಸಿನ್- ಬಿ ಔಷಧಿಯನ್ನ ಹಂಚಿಕೆ ಮಾಡಲಾಗಿದೆ. ನಿನ್ನೆ 1,220 ವಯಲ್ಸ್, ಮೇ 24 ರಂದು 1,030 ವಯಲ್ಸ್, ಮೇ 21 ರಂದು 1,270 ವಯಲ್ಸ್​ಗಳನ್ನ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.

ಇನ್ನು ಮಹಾರಾಷ್ಟ್ರಕ್ಕೆ 18,140 ವಯಲ್ಸ್​, ಗುಜರಾತ್​ಗೆ 17,330 ವಯಲ್ಸ್​, ಮಧ್ಯಪ್ರದೇಶಕ್ಕೆ 6150 ವಯಲ್ಸ್​ಗಳನ್ನ ಹಂಚಿಕೆ ಮಾಡಲಾಗಿದೆ.

The post ಬ್ಲ್ಯಾಕ್ ಫಂಗಸ್ ವಿರುದ್ಧ ಹೋರಾಟ: ರಾಜ್ಯಕ್ಕೆ 5,190 ವಯಲ್ಸ್ ​ಆ್ಯಂಫೊಟೆರಿಸಿನ್- ಬಿ ಹಂಚಿಕೆ appeared first on News First Kannada.

Source: newsfirstlive.com

Source link