ಕೊಪ್ಪಳ: ಲಾಕ್ ಡೌನ್ ಸಡಲಿಕೆ ಆದ್ರೂ ಜಿಲ್ಲೆಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶವಿಲ್ಲ ಅಂತ ಜಿಲ್ಲಾಡಳಿತ ತೀರ್ಮಾನಿಸಿದೆ.

ಮಂಗಳವಾರ ಹಾಗೂ ಶುಕ್ರವಾರದಂದು ಪ್ರತ್ಯೇಕವಾಗಿ ಭಕ್ತರಿಗೆ ನಿಷೇಧ ಹೇರಲಾಗಿದೆ. ಕೊರೊನಾವನ್ನ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ತೀರ್ಮಾನಿಸಿರೋದ್ರಿಂದ ಮಂಗಳವಾರ ಹಾಗೂ ಶುಕ್ರವಾರದಂದು ಭಕ್ತರಿಗೆ ಅವಕಾಶ ನಿರ್ಬಂಧಿಸಲಾಗಿದೆ. ಅದ್ರಲ್ಲೂ ಈ ಎರಡು ದಿನ ಹೆಚ್ಚು ಭಕ್ತರು ಅನ್ಯ ರಾಜ್ಯ ಹಾಗೂ ಅಕ್ಕಪಕ್ಕ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ಹಿನ್ನೆಲೆ ದರ್ಶನಕ್ಕೆ ನಿಷೇಧ ಹೇರಲಾಗಿದೆ. ಜುಲೈ 22 ರಿಂದ 24ರವರೆಗೆ ದೇವಸ್ಥಾನದ 2ಕಿ.ಮೀ ವ್ಯಾಪ್ತಿಯಲ್ಲಿ ಸೆಕ್ಷನ್​144 ಜಾರಿ ಮಾಡಿ ಭಕ್ತರಿಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಕೇವಲ ಗರ್ಭಗುಡಿಯಲ್ಲಿ ಆರ್ಚಕರಿಗೆ ಪೂಜೆ ಮಾಡಲು ಅವಕಾಶವಿದೆ ಅಂತ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಳಕರ್ ಅವರು ಆದೇಶ ಹೊರಡಿಸಿದ್ದಾರೆ.

The post ಭಕ್ತರಿಗಿಲ್ಲ ಹುಲಿಗೆಮ್ಮ ದೇವಿ ದರ್ಶನಕ್ಕೆ ಅವಕಾಶ: ಜಿಲ್ಲಾಡಳಿತದಿಂದ 144ಸೆಕ್ಷನ್​ ಜಾರಿ appeared first on News First Kannada.

Source: newsfirstlive.com

Source link