ಭಗತ್​, ಹೆಡ್ಗೆವಾರ್, ನಾರಾಯಣ ಗುರು ಬಗ್ಗೆ ವಿವಾದ ಮಾಡುತ್ತಿರುವವರು ಪಠ್ಯ ಪುಸ್ತಕಗಳನ್ನು ಓದಿದವರಲ್ಲ: ರೋಹಿತ್ ಚಕ್ರತೀರ್ಥ | Those who dispute Bhagat, Hedgewar, Narayana Guru are not those who have read the text books: says rohit chakrathirtha


ಭಗತ್​, ಹೆಡ್ಗೆವಾರ್, ನಾರಾಯಣ ಗುರು ಬಗ್ಗೆ ವಿವಾದ ಮಾಡುತ್ತಿರುವವರು ಪಠ್ಯ ಪುಸ್ತಕಗಳನ್ನು ಓದಿದವರಲ್ಲ: ರೋಹಿತ್ ಚಕ್ರತೀರ್ಥ

ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ

ಭಗತ್, ನಾರಾಯಣಗುರು ಪಾಠ ಬಿಟ್ಟಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ್ದು, ನಾರಾಯಣ ಗುರು ಪಾಠ ಕೈ ಬಿಡುವ ಪ್ರಶ್ನೆಯಿಲ್ಲ. ಇದು 7ನೇ ತರಗತಿ ಹಾಗೂ 10ನೇ ತರಗತಿಯಲ್ಲಿ ಕೂಡಾ ಇದೆ.

ಬೆಂಗಳೂರು: ಭಗತ್, ಹೆಡ್ಗೆವಾರ್, ನಾರಾಯಣಗುರುಗಳ ಬಗ್ಗೆ ವಿವಾದ ಮಾಡುತ್ತಿರುವವರು ಪಠ್ಯ ಪುಸ್ತಕಗಳನ್ನು ಓದಿದವರಲ್ಲ. ಎಡ ಸಿದ್ದಾಂತಿಗಳು ಅವರು ಕಟ್ಟಿರುವ ಸೌಧವನ್ನು ಸ್ಪಲ್ಪ ಅಲಗಾಡಿಸಿದರು ತಡೆದುಕೊಳ್ಳೊಕೆ ಆಗಲ್ಲ. ಈ ಕಾರಣಕ್ಕೋಸ್ಕರ ಅವರು ವಿವಾದಗಳನ್ನು ಮಾಡುತ್ತಿದ್ದಾರೆ ಎಂದು ಟಿವಿ 9ಗೆ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿಕೆ ನೀಡಿದ್ದಾರೆ. ಅಲ್ಲೊಂದು, ಇಲ್ಲೊಂದು ಪಿಡಿಎಫ್ ಓಡುತ್ತಿದೆ ಅದು ಯಾವುದು ಅಧಿಕೃತವಲ್ಲ. ಕೆಲವು ಪುಟಗಳನ್ನು ಸೇರಿಸಬಹುದು, ಅಥವಾ ತೆಗೆಯಬಹುದು ಹಾಗಾಗಿ ಅಧಿಕೃತವಾಗಿ ಯಾವುದು ಪಿಡಿಎಫ್ ಬಂದಿಲ್ಲ. ಪಠ್ಯಪುಸ್ತಕ ಮಕ್ಕಳ ಕೈಗೆ ಹೋಗುವವರೆಗೂ ಯಾವ ವದಂತಿಗೆ ಕಿವಿಕೊಡಬಾರದು. ಭಗತ್, ನಾರಾಯಣಗುರು ಪಾಠ ಬಿಟ್ಟಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ್ದು, ನಾರಾಯಣ ಗುರು ಪಾಠ ಕೈ ಬಿಡುವ ಪ್ರಶ್ನೆಯಿಲ್ಲ. ಇದು 7ನೇ ತರಗತಿ ಹಾಗೂ 10ನೇ ತರಗತಿಯಲ್ಲಿ ಕೂಡಾ ಇದೆ ಎಂದು ಹೇಳಿದರು.

7ನೇ ತರಗತಿಯಲ್ಲಿ ಸಮಾಜ ಸುಧಾರಕರ ಬಗ್ಗೆ ಹೇಳುತ್ತೇವೆ. ಅದರಲ್ಲಿ ಅನೇಕ ವ್ಯಕ್ತಿಗಳು ಇದ್ದಾರೆ. ಅದರಲ್ಲೂ ಕೂಡ ಮುಸ್ಲಿ ನಾಯಕರು ಇದ್ದಾರೆ. ಬೇರೆ ಬೇರೆ ಜಾತಿಯ ಸಮಾಜ ಸುಧಾಕರು ಇದ್ದಾರೆ. ಅವರೆಲ್ಲರ ಜೊತೆ ನಾರಾಯಣಗುರುಗಳ ಬಗ್ಗೆ ಒಂದು ಪುಟದ ವಿವರಣೆ ಇದೆ. 10ನೇ ತರಗಿಯಲ್ಲಿಯೂ ನಾರಾಯಣ ಗುರುಗಳ ಬಗ್ಗೆ ವಿಸ್ತಾರವಾಗಿ ಕೊಟ್ಟಿದ್ದೇವೆ. ಪೇರಿಯಾರ ಬಗ್ಗೆಯೂ ಹಾಕಿದ್ದೇವೆ, ಅವರು ಕೂಡಾ ಸಮಾಜಿಕ ಕ್ರಾಂತಿ ಮಾಡಿದ್ದಾರೆ. ಆದರೆ ಹೆಗ್ಡೆವಾರ್ ಹೆಸರನ್ನು ಇಟ್ಟುಕೊಂಡು ವಿವಾದ ಮಾಡುತ್ತಿದ್ದಾರೆ. ಇದು ಪಕ್ಷ, ಸಮುದಾಯ ಟಾರ್ಗೆಟ್ ಮಾಡಿ ಈ ರೀತಿ ಮಾಡುತ್ತಿದ್ದಾರೆ ಎಂದರು. ಹೆಗ್ಡೆವಾರ ವಿಚಾರ ಪಠ್ಯಪುಸ್ತಕದಲ್ಲಿ ಯಾಕೆ ಎಂದು ಕಾಂಗ್ರೆಸ್ ಹೇಳಿಕೆ ವಿಚಾರ ಹಿನ್ನೆಲೆ ಸತ್ಯಾಗ್ರಹದ ಬಗ್ಗೆ ಹೇಳುವಾಗ ಗಾಂದಿಜಿ ಬಗ್ಗೆ ಹೇಳುತ್ತೇವೆ. ಹಾಗೇಯೆ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಹೇಳುವಾಗ ಹೆಗ್ಡೆವಾರ್ ಬಗ್ಗೆ ಹೇಳುತ್ತೇವೆ. ಹಾಗೇಯೆ ವ್ಯಕ್ತಿತ್ವ ನಿರ್ಮಾಣದಲ್ಲಿ ಜೋವನದಲ್ಲಿ ತೊಡಗಿಸಿದ್ರು. ಬದುಕ್ಕಿದ್ದಾಗಲೇ ಆರ್​ಎಸ್​ಎಸ್​ ಸಂಘಟನೆ ಇಡಿ ದೇಶದಲ್ಲಿಯೇ ಸ್ವಯಂ ಸಂಘಟನೆ ಆಗಿತ್ತು. ಸಾವಿರಾರು ಕಾರ್ಯಕರ್ತರು ದುಡಿಯುತ್ತಿದ್ದರು. ಪ್ರತಿನಿತ್ಯ ಸಾವಿರಾರು ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ರು. ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗೆ ಬೆಳೆಯಬೇಕು, ಉದ್ದೇಶ ಹೇಗೆ ಇಟ್ಟುಕೊಳ್ಳಬೇಕು, ಯಾವ ರೀತಿ ತನ್ನ ಜೀವನ ರೂಪಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಭವಿಷ್ಯ ಅವರಷ್ಟು ಅನುಭವ ಆ ಕಾಲದಲ್ಲಿ ಯಾರಿಗೂ ಸಿಕ್ಕಿರಕ್ಕಲಿಲ್ಲ.
ಅಂತಹ ಒಬ್ಬ ವ್ಯಕ್ತಿ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಮಾತನಾಡುವಾಗ ನಿಮ್ಮ ಜೀವನದಲ್ಲಿ ವ್ಯಕ್ತಿಯನ್ನು ಇಟ್ಟುಕೊಳ್ಳಬೇಕಾ, ಅಥವಾ ಮೌಲ್ಯವನ್ನು ಇಟ್ಟುಕೊಳ್ಳಬೇಕಾ ಎಂದು ಹೇಳುವಾಗ ಆ ಮಾತು ಖಂಡಿತ ಮುಖ್ಯ ಆಗುತ್ತೆ ಎಂದು ಹೇಳಿದರು.

TV9 Kannada


Leave a Reply

Your email address will not be published. Required fields are marked *