ಉ.ಪ್ರದೇಶದ: ಭಗವಾನ್ ಶ್ರೀಕೃಷ್ಣನ ವಿಗ್ರಹ ಶುಚಿ ವೇಳೆ ಹಾನಿಗೊಂಡಿದ್ದು ಅದಕ್ಕೆ ಚಿಕಿತ್ಸೆ ನೀಡಿ ಎಂದು ಅರ್ಚಕರೊಬ್ಬರು ಆಸ್ಪತ್ರೆಗೆ ಬಂದು ಪಟ್ಟು ಹಿಡಿದ ಅಪರೂಪದ ಘಟನೆ ರಾಜ್ಯದ ಆಗ್ರಾದಲ್ಲಿ ನಡೆದಿದೆ.
ದೇವಸ್ಥಾನದ ಅರ್ಚಕ ಲೇಖ್ ಸಿಂಗ್, ಬೆಳಗ್ಗೆ ದೇವರ ವಿಗ್ರಹವನ್ನ ಶುಚಿ ಮಾಡುವಾಗ ಆಕಸ್ಮಿಕ ಕೈ ಮುರಿದು ಹೋಗಿದೆ. ಈ ಕೈಯನ್ನ ಜೋಡಿಸಿ ಅಂತ ಅರ್ಚಕ ವೈದ್ಯರ ಬಳಿ ಬಂದಿದ್ದಾನೆ. ಈ ವ್ಯಕ್ತಿಯ ವಿಚಿತ್ರ ವರ್ತನೆಗೆ ಅಚ್ಚರಿಗೊಂಡ ವೈದ್ಯರ ಶ್ರೀ ಕೃಷ್ಣ ಎಂಬ ಹೆಸರಲ್ಲಿ ನೋಂದಣಿ ಮಾಡಿಕೊಂಡು, ಬಾಲ ಕೃಷ್ಣನ ವಿಗ್ರಹಕ್ಕೆ ಬ್ಯಾಂಡೇಜ್ ಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ಅಗರವಾಲ್ ‘ಕೈ ಮುರಿದುಕೊಂಡಿರುವ ವಿಗ್ರಹದೊಂದಿಗೆ ಅರ್ಚಕರೊಬ್ಬರು ಬಂದು ಚಿಕಿತ್ಸೆ ನೀಡುವಂತೆ ಕಣ್ಣೀರಿಡಲು ಆರಂಭಿಸಿದರು. ಹಾಗಾಗಿ ನಾವು ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ‘ಶ್ರೀ ಕೃಷ್ಣ’ ಹೆಸರಿನಲ್ಲಿ ನೋಂದಣಿ ಮಾಡಿಸಿ ಅರ್ಚಕರ ತೃಪ್ತಿಗಾಗಿ ವಿಗ್ರಹಕ್ಕೆ ಬ್ಯಾಂಡೇಜ್ ಮಾಡಿದ್ದೇವೆ ಎಂದು ಹೇಳಿದ್ದಾರೆ.