ಲಕ್ಷ್ಮಣ್ ಚೌಹಾಣ್
ಯಾದಗಿರಿ: ಭತ್ತ ಕಟಾವು ಮಾಡುವ ಯಂತ್ರ ಕದ್ದಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದಿದೆ. 15 ದಿನದ ಹಿಂದೆ ರಾಜು ರಾಠೋಡ್ಗೆ ಸೇರಿದ್ದ 25 ಲಕ್ಷ ರೂ. ಮೌಲ್ಯದ ಭತ್ತ (Paddy) ಕಟಾವು ಯಂತ್ರ ಕದ್ದಿದ್ದ ಆರೋಪಿಯನ್ನು ಹುಣಸಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ್ ಚೌಹಾಣ್ ಬಂಧಿತ ಆರೋಪಿ. ಕಳ್ಳತನಕ್ಕೆ ಬಳಸಿದ್ದ ಕ್ಯಾಂಟರ್ ಲಾರಿಯನ್ನು (Lorry) ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ (police station) ಈ ಸಂಬಂಧ ಪ್ರಕರಣ ದಾಖಲಾಗಿದೆ.
ತಮಿಳುನಾಡು: ಜಲ್ಲಿಕಟ್ಟು ಸ್ಪರ್ಧೆ ವೇಳೆ ಯುವಕನನ್ನು ಎಳೆದೊಯ್ದ ಹೋರಿ
ಜಲ್ಲಿಕಟ್ಟು ಸ್ಪರ್ಧೆ ವೇಳೆ ಯುವಕನನ್ನು ಹೋರಿ ಎಳೆದೊಯ್ದ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಿನ್ನೆ ನಡೆದಿದೆ. ಯುವಕನ ಕತ್ತಿಗೆ ಹಗ್ಗ ಉರುಳಾಗಿ ಸುಮಾರು 100 ಮೀಟರ್ ದೂರ ಹೋರಿ ಎಳೆದೊಯ್ದಿದೆ. ಕೂಡಲೇ ಹೋರಿ ತಡೆದು ಯುವಕನನ್ನು ಜನರು ರಕ್ಷಿಸಿದ್ದಾರೆ. ಎತ್ತು ಯುವಕನನ್ನು ಎಳೆದುಕೊಂಡು ಓಡುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.