ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಸ್ಟೇಡಿಯಂಗೇ ನುಗ್ಗಿದ.. ರೋಹಿತ್ ಪ್ರೀತಿಗೆ ತಲೆಬಾಗಿ ದೂರದಲ್ಲೇ ನಮಸ್ಕರಿಸಿದ ಅಭಿಮಾನಿ


ರಾಂಚಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್​​ಗಳ ಅಂತರದಿಂದ ಗೆದ್ದು ಬೀಗಿದೆ. ಇದರೊಂದಿಗೆ ಟೀಮ್ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿ ಕೈವಶ ಮಾಡಿಕೊಂಡಿದೆ. ಆದ್ರೆ, ಈ ಪಂದ್ಯದಲ್ಲಿ ಆತಂಕ ಮೂಡಿಸುವಂತೆ ಸನ್ನಿವೇಶಕ್ಕೆ ಕಾರಣವಾಗಿ ಗಮನ ಸೆಳೆದಿದೆ.

ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್​ ವೇಳೆ ರೋಹಿತ್ ಶರ್ಮಾರ ಅಭಿಮಾನಿಯೊರ್ವ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ್ದಾನೆ. ಈ ವೇಳೆ ಮಿಡ್ ಆನ್​​​​​​​​​​​​​​​​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಬಳಿ ಅಭಿಮಾನಿ ತೆರಳಿದ್ದಾನೆ.

ಇದನ್ನ ಗಮನಿಸಿದ ರೋಹಿತ್ ದೂರದಲ್ಲೇ ನಿಲ್ಲುವಂತೆ ಸೂಚಿದರು. ಇದನ್ನ ಅಂಗೀಕರಿಸಿದ ಅಭಿಮಾನಿ ದೂರದಿಂದಲೇ ನಮಸ್ಕರಿಸಿದ್ದಾನೆ. ಈ ವೇಳೆ ಕಾರ್ಯ ಪ್ರವೃತ್ತರಾದ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನ ಹೊರಗೆ ಎಳೆದೊಯ್ದಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *