ವಿಜಯಪುರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧನೊಬ್ಬ ಹುತಾತ್ಮರಾದ ಘಟನೆ ನಡೆದಿದೆ. ಉಕ್ಕಲಿ ಗ್ರಾಮದ ಕಾಶಿರಾಯ ಶಂಕ್ರಪ್ಪ ಬೊಮ್ಮನಳ್ಳಿ (35) ಹುತಾತ್ಮರಾದ ಯೋಧ.

ಕಾಶಿರಾಯ ಬೊಮ್ಮನಳ್ಳಿ ಕರ್ತವ್ಯದಲ್ಲಿದ್ದ ವೇಳೆ, ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭ ಕಾಶಿರಾಯಗೆ ಗುಂಡು ತಾಗಿ ಹುತಾತ್ಮರಾಗಿದ್ದಾರೆ. ಈ ಮಾಹಿತಿ ಯೋಧನ ಕುಟುಂಬಕ್ಕೆ, ಸೇನಾಧಿಕಾರಿಗಳು ತಿಳಿಸುತ್ತಿದ್ದಂತೆ, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ಕಾರ್ಮೋಡ ಕವಿದಿದೆ.

ಹುತಾತ್ಮ ಯೋಧ ಕಾಶಿರಾಯ ಬೊಮ್ಮನಳ್ಳಿ, ಪಾರ್ಥಿವ ಶರೀರ ಇಂದು ಶ್ರೀನಗರದಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದ್ದು, ಬಳಿಕ ಬೆಳಗಾವಿಯಿಂದ ಯೋಧನ ಸ್ವಗ್ರಾಮ ಉಕ್ಕಲಿಗೆ ತಲುಪೋ ನಿರೀಕ್ಷೆ ಇದ್ದು, ನಂತರ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ. ಹುತಾತ್ಮ ಯೋಧ, ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಇಬ್ಬರು ಸಹೋದರನನ್ನು ಅಗಲಿದ್ದಾರೆ.

The post ಭಯೋತ್ಪಾದಕರ ಗುಂಡಿನ ದಾಳಿಗೆ ವಿಜಯಪುರದ ಯೋಧ ಹುತಾತ್ಮ.. ಕುಟುಂಬದಲ್ಲಿ ಮಡುಗಟ್ಟಿದ ಮೌನ appeared first on News First Kannada.

Source: newsfirstlive.com

Source link