ಎನ್ಐಎ
ನಿಷೇಧಿತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ತಳಮಟ್ಟದ ಕೆಲಸಗಾರರಿಗೆ ಸಹಾಯ ಮಾಡಿ, ರಹಸ್ಯ ದಾಖಲೆಗಳು, ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದಡಿ ರಾಷ್ಟ್ರೀಯ ತನಿಖಾ ದಳ (National Investigation Agency) ತನ್ನ ಮಾಜಿ ಎಸ್ಪಿ, ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಎಂಬುವರನ್ನು ಬಂಧಿಸಿದೆ. ಐಪಿಎಸ್ ಅಧಿಕಾರಿಯನ್ನು (IPS officer) ಬಂಧಿಸಿರುವ ಬಗ್ಗೆ ಎನ್ಐಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ಪ್ರಕರಣದಲ್ಲಿ ಈ ಮೊದಲು ಎನ್ಐಎ ಆರು ಮಂದಿಯನ್ನು ಬಂಧಿಸಿತ್ತು. ಇದೀಗೆ ಅರೆಸ್ಟ್ ಆಗಿರುವ ನೇಗಿ 2011ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಕಳೆದ ವರ್ಷ ನವೆಂಬರ್ 6ರಂದು ಎನ್ಐಎ ಕೇಸ್ ದಾಖಲಿಸಿಕೊಂಡಿತ್ತು.