ನವದೆಹಲಿ: ದೇಶದಲ್ಲಿ ದಿನೇ ದಿನೇ ಡೆಲ್ಟಾ ಪ್ಲಸ್​​ ಕೊರೊನಾ ವೈರಸ್​​ ಹಂತ ಹಂತವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಈವರೆಗೂ 40 ಮಂದಿಯಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದ್ದು, ಬಹುತೇಕ ಪ್ರಕರಣಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ಮಹಾರಾಷ್ಟ್ರ 21, ಮಧ್ಯಪ್ರದೇಶ 6, ಕೇರಳದಲ್ಲಿ ಮತ್ತು ತಮಿಳುನಾಡಿನಲ್ಲಿ ತಲಾ 3 ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದೆ. ಇನ್ನು ಕರ್ನಾಟಕದಲ್ಲಿ 2, ಆಂಧ್ರ ಪ್ರದೇಶ, ಜಮ್ಮುಗಳಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.

ಇನ್ನುಳಿದಂತೆ ಅಮೆರಿಕಾ, ಇಂಗ್ಲೆಂಡ್​​, ಪೋರ್ಚುಗಲ್, ಸ್ವಿಝರ್​ ಲ್ಯಾಂಡ್, ಜಪಾನ್, ರಷ್ಯಾ, ಚೀನಾ ಹಾಗೂ ಪೋಲೆಂಡ್ ಗಳಲ್ಲಿ ಡೆಲ್ಟಾ ಪ್ಲಸ್ ಸೋಂಕು ಕಂಡು ಬಂದಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆಯ ಎಚ್ಚರಿಕೆ ಬೆನ್ನಲ್ಲೇ ಡೆಲ್ಟಾ ಪ್ಲಸ್​ ಸೋಂಕಿನ ಪ್ರಕರಣಗಳು ಕಂಡು ಬಂದಿರುವುದು ಆತಂಕವನ್ನು ಉಂಟು ಮಾಡಿದೆ. ಸೋಂಕಿನ ನಿಯಂತ್ರಣ ಹಾಗೂ ಪತ್ತೆ ಮಾಡಲು ಕ್ರಮಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ದೇಶದಲ್ಲಿ 28ಕ್ಕೂ ಹೆಚ್ಚು ಜಿನೋಮ್ ಲ್ಯಾಬ್ ಗಳನ್ನು ಸೆಟಪ್ ಮಾಡಲು ಮುಂದಾಗಿದೆ.

The post ಭಯ ಹುಟ್ಟಿಸಿದ ಡೆಲ್ಟಾ ಪ್ಲಸ್ ಸೋಂಕು- ದೇಶದಲ್ಲಿ 40 ಪ್ರಕರಣಗಳು ದೃಢ appeared first on News First Kannada.

Source: newsfirstlive.com

Source link