ಚಿಕ್ಕಮಗಳೂರು: ಸೈಬರ್ ಹಾಗೂ ನಾರ್ಕೋಟಿಕ್ ಇನ್ಸ್ಪೆಕ್ಟರ್  ರಕ್ಷಿತ್ ಭರ್ಜರಿ ಬೇಟೆಯಾಡುವ ಮೂಲಕ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನ ಬಂಧಸಿದ್ದಾರೆ. ಅಬುಬಕರ್, ಸಾಧತ್ ಅಲಿ, ರೋಷನ್ ಸಮೀರ್, ಪುನೀತ್, ಮೊಹಮ್ಮದ್ ಇಮ್ರಾಜ್ ಬಂಧಿತ ಅರೋಪಿಗಳು.

ಚಿಕ್ಕಮಗಳೂರಿನ ಮೂಗ್ತಿಹಳ್ಳಿ ಸಮೀಪ ಬಂಧಿತರಿಂದ 7 ಲಕ್ಷದ 50 ಸಾವಿರ ಮೌಲ್ಯದ 30 ಕೆ.ಜಿ ಗಾಂಜಾ, ಒಂದು ಲಗೇಜ್ ಆಟೋ ಒಂದು ಬೈಕ್ ಹಾಗೂ 7 ಮೊಬೈಲ್​ಗಳನ್ನ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಆಂಧ್ರಪ್ರದೇಶದ ಹಿಂದೂಪುರದಿಂದ ಗಾಂಜಾ ಸಪ್ಲೈ ಮಾಡಿಸಿಕೊಂಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೂ ಗಾಂಜಾ ಸಪ್ಲೈ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಚಿಕ್ಕಮಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಭರ್ಜರಿ ಬೇಟೆ: ಹಲವು ರಾಜ್ಯಗಳಿಗೆ ಸಪ್ಲೈ ಆಗ್ತಿದ್ದ ಭಾರೀ ತೂಕದ ಗಾಂಜಾ ಸೀಜ್ appeared first on News First Kannada.

Source: newsfirstlive.com

Source link