ಧಾರವಾಡ/ಚಿತ್ರದುರ್ಗ: ರಾಜ್ಯದಲ್ಲಿ ಸುರಿದ ನಿರಂತರ ಮಳೆಗೆ ವಿವಿಧೆಡೆ ಅವಾಂತರಗಳು ಸೃಷ್ಟಿಯಾಗಿವೆ. ಆದ್ರೆ, ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರೋದಕ್ಕೆ ಬತ್ತಿ ಬರಡಾಗಿದ್ದ ಕೆರೆ ಹಳ್ಳಗಳು ಮರುಜೀವ ಪಡೆದುಕೊಂಡಿವೆ. ವರುಣ ತಂದ ಅವಾಂತರಗಳ ಮಧ್ಯೆಯೆ ಕೆಲವೊಂದು ತಾಣಗಳು ರಮಣಿಯತೆ ಸೃಷ್ಟಿಸಿವೆ.
ಚುಮು ಚುಮು ಚಳಿಯಲ್ಲಿ ಬಂಡೆಯ ಮೇಲಿಂದ ಹಾಲ್ನೊರೆಯಂತೆ ಹರಿದು ಹೋಗ್ತಿರೋ ನೀರು, ಕೆರೆಯಂಗಳ ಆವರಿಸಿರೋ ಬೆಟ್ಟ ಗುಡ್ಡ, ಪ್ರಕೃತಿ ಮಾತೆಯ ಪ್ರತಿಬಿಂಬ. ಸುಂದರ ತಾಣದಲ್ಲಿ ಓಡಾಡ್ತಾ ಎಂಜಾಯ್ ಮಾಡ್ತಿರೋ ಪ್ರವಾಸಿಗರು. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ತಾಲೂಕಿನ ಇತಿಹಾಸ ಪ್ರಸಿದ್ಧ ಚಂದ್ರವಳ್ಳಿ.
ಹೌದು, ಈ ವರ್ಷದ ಉತ್ತಮ ಮಳೆಗೆ ಚಂದ್ರವಳ್ಳಿ ಕೆರೆ ಐದು ವರ್ಷಗಳ ಬಳಿಕ ತುಂಬಿ ಹರಿಯುತ್ತಿದೆ. ಕೆರೆಯ ನೀರು ಬಂಡೆಗಳ ಮೇಲೆ ಹರಿದು ಹೋಗುವಾಗ ಹಾಲ್ನೊರೆಯಂತೆ ಕಾಣುವ ದೃಶ್ಯ ನೋಡುಗರಿಗೆ ಕಣ್ಮನ ಸೆಳೆಯುತ್ತಿದೆ. ಹೊಸ ಫಾಲ್ಸ್ ನಿರ್ಮಾಣವಾದಂತಾಗಿ ಜನರಿಗೆ ಮುದ ನೀಡುತ್ತಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರು, ಸ್ಥಳೀಯರು ಈ ತಾಣಕ್ಕೆ ಬಂದು ಪ್ರಕೃತಿ ಮಡಿಲಲ್ಲಿ ಮಿಂದೇಳುತ್ತಿದ್ದಾರೆ. ನಿಶಬ್ದವಾದ ಕೆರೆ ಅಂಗಳದಲ್ಲಿ ನಿಂತಿರುವ ನೀರಿನ ಮೇಲೆ ಕೋಟೆಕೊತ್ತಲುಗಳ, ಮರಗಿಡಗಳು ಕನ್ನಡಿಯಲ್ಲಿ ಹೊಳೆದಂತೆ ಕಾಣುವ ಪ್ರತಿಬಿಂಬದ ದೃಶ್ಯ ಸಖತ್ ಥ್ರಿಲ್ ಕೊಡ್ತಿದೆ.
ಇನ್ನು, ಫಾಲ್ಸ್ ನಲ್ಲಿ ಸೆಲ್ಫಿಗೆ ಮುಗಿಬಿದ್ದಿರೋ ಪ್ರವಾಸಿಗರು. ಭೋರ್ಗರೆದು ಹರಿಯುವ ನೀರಲ್ಲೇ ಯುವತಿಯರ ಚೆಲ್ಲಾಟ. ಹೌದು ಇದ್ಯಾವುದೋ ಮಡಿಕೇರಿನೋ, ಚಿಕ್ಕಮಗಳೂರು ಫಾಲ್ಸ್ ನೋ ಅಲ್ಲ, ಬದಲಾಗಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೀರಸಾಗರದ ಅದ್ಭುತ ದೃಶ್ಯ. ನಿರಂತರ ಸುರಿದ ಅಕಾಲಿಕ ಮಳೆಯಿಂದ ಕೆರೆಯ ಕೋಡಿ ಬಿದ್ದಿದ್ದು, ಅವಾಂತರದ ನಡುವೆಯೇ ಜನ ಸುಂದರ ಪ್ರಕೃತಿಯನ್ನ ಸವಿಯೋಕೆ ಆಗಮಿಸುತ್ತಿದ್ದಾರೆ. ಅದರಲ್ಲೂ ಮಿನಿ ನಯಾಗರ ತರ ಕಾಣುವ ಈ ಫಾಲ್ಸ್ ನಲ್ಲಿ ಯುವಕ ಯುವತಿಯರು ತಂಡೋಪತಂಡವಾಗಿ ಆಗಮಿಸಿ ಮಸ್ತ್ ಮಜಾ ಮಾಡುತ್ತಿದ್ದಾರೆ.
ಇನ್ನು ಹಲವು ದಿನಗಳಿಂದ ಈ ಕೆರೆಯಲ್ಲಿ ನೀರು ಕಡಿಮೆಯಾಗಿತ್ತು. ಆದ್ರೆ ನಿರಂತರ ಮಳೆಯಿಂದಾಗಿ ಕೆರೆ ಸಂಪೂರ್ಣ ಭರ್ತಿಯಾಗಿದೆ.. ಅಲ್ಲದೆ ಕೆರೆಯ ಕೋಡಿ ಬಿದ್ದ ಪರಿಣಾಮ ಜನರು ನೀರು ಕಂಡು ಫುಲ್ ಖುಷ್ ಆಗಿದ್ದಾರೆ. ವಿವಿಧ ಜಿಲ್ಲೆ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಪ್ರವಾಸಿಗರು ಆಗಮಿಸಿ ಕೆರೆಯ ಸೌಂದರ್ಯದ ಸೊಬಗು ಸವಿಯುದರ ಜೊತೆಗೆ, ಮಿನಿ ಫಾಲ್ಸ್ ನಲ್ಲಿ ಕುಟುಂಬ ಸಮೇತ ಎಂಜಾಯ್ ಮಾಡ್ತಿದ್ದಾರೆ. ಬೃಹತ್ ಜಲಾಶಯ ಆಗಿದ್ದರಿಂದ ಕೆರೆಯ ನೀರು ಹೆಚ್ಚೆಚ್ಚು ಹರಿಯುತ್ತಿದ್ದು, ನೀರಿನ ರಭಸಕ್ಕೆ ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಒಮ್ಮೆ ಅಲ್ಲ ಇನ್ನು ಹೆಚ್ಚೆಚ್ಚು ಬಾರಿ ಭೇಟಿ ನೀಡ್ತಿವಿ ಅನ್ನೋ ಮಾತುಗಳನ್ನ ಆಡುತ್ತಾರೆ