ಳಿಗಾಲದಲ್ಲಿ ಖಾರವಾಗಿ ಏನನ್ನಾದರು ತಿನ್ನಬೇಕು ಎಂದು ಮಾಂಸಪ್ರಿಯರು ಅಂದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಹೆಚ್ಚಾಗಿ ಹಂದಿ ಮಾಂಸದಿಂದ ತಯಾರಿಸುವ ಪದಾರ್ಥಗಳನ್ನು ಸವಿಯಲು ಬಯಸುತ್ತಾರೆ. ಹೀಗಾಗಿ ನೀವು ಇಂದು ಮನೆಯಲ್ಲಿ ಪೋರ್ಕ್ ಪ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:

* ಈರುಳ್ಳಿ – 2
* ಹಸಿಮೆಣಸಿನ ಕಾಯಿ – 5 ರಿಂದ 6
* ಶುಂಠಿ, ಬೆಳ್ಳುಳ್ಳಿ – 2 ಟೀ ಸ್ಪೂನ್
* ಅರಿಶಿಣ- 1 ಟೀ ಸ್ಪೂನ್
* ಖಾರದ ಪುಡಿ – 2 ಟೀ ಸ್ಪೂನ್
* ದನಿಯಾ ಪುಡಿ – 2 ಟೀ ಸ್ಪೂನ್
* ಲಿಂಬೆ ಹಣ್ಣು
* ಕಾಳುಮೆಣಸಿನ ಪುಡಿ- 3 ಟೀ ಸ್ಪೂನ್
* ಹಂದಿ ಮಾಂಸ – 1 ಕೆಜಿ
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
* ಹಂದಿ ಮಾಂಸವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಕುಕ್ಕರ್‌ಗೆ  ಹಾಕಿ ಮೊದಲು ಒಲೆ ಮೇಲೆ ಇಡಬೇಕು. ಇದನ್ನೂ ಓದಿ:  ಸಂಜೆ ತಿಂಡಿಗೆ ಹೆಸರುಬೇಳೆ ಪಕೋಡ ಮಾಡಿ

* ಇದೇ ಕುಕ್ಕರ್‌ನಲ್ಲಿ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಅರಿಶಿಣ, ಉಪ್ಪು, ಹಾಕಿ ಕಲಸಿಕೊಳ್ಳಬೇಕು.

* ಕಾಳುಮೆಣಸಿನ ಪುಡಿ ಹಾಕಿ ಅದಕ್ಕೆ ಬೇಕಾದಷ್ಟು ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ, 2 ವಿಜಿಲ್ ಬರಿಸಬೇಕು.

* ನಂತರ ಒಂದು ಬಣಲೆಗೆ ದನಿಯಾ ಪುಡಿ ಮತ್ತು ಖಾರದ ಪುಡಿ ಹಾಕಿ ಫ್ರೈ ಮಾಡಬೇಕು.

* ನಂತರ ಹುರಿದ ಪುಡಿಯನ್ನು ಮಾಂಸಕ್ಕೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ 2ರಿಂದ 3 ನಿಮಿಷ ಬೇಯಿಸಿದರೆ ಈಗ ರುಚಿಕರವಾದ ಮಲೆನಾಡಿನ ಪೋರ್ಕ್ ಫ್ರೈ ಸವಿಯಲು ಸಿದ್ಧವಾಗುತ್ತದೆ.

The post ಭಾನುವಾರದ ಬಾಡೂಟಕ್ಕೆ ಮಾಡಿ ಪೋರ್ಕ್ ಪ್ರೈ appeared first on Public TV.

Source: publictv.in

Source link