ಭಾರತಕ್ಕೆ ಆಗಮಿಸಿದ ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್; ಪಿಎಂ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ | Danish PM Mette Frederiksen arrives in India will Meet PM Narendra Modi

ಭಾರತಕ್ಕೆ ಆಗಮಿಸಿದ ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್; ಪಿಎಂ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ

ಭಾರತಕ್ಕೆ ಬಂದ ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್

ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್ (Mette Frederiksen) ಇಂದಿನಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಹಮ್ಮಿಕೊಂಡಿದ್ದು, ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಭಾರತಕ್ಕೆ ಇಂದು ಆಗಮಿಸಿದ ಅವರನ್ನು ದೆಹಲಿ ಏರ್​ಪೋರ್ಟ್​​ನಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯ ಸಚಿವರಾದ ಮೀನಾಕ್ಷಿ ಲೇಖಿ ಸ್ವಾಗತಿಸಿದ್ದಾರೆ.  

ಮೆಟ್ಟೆ ಫ್ರೆಡ್ರಿಕ್ಸನ್ ಅಕ್ಟೋಬರ್​ 11ರವರೆಗೆ ಭಾರತದಲ್ಲಿ ಇರಲಿದ್ದು, ಈ ಅವಧಿಯಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರನ್ನು ಭೇಟಿಯಾಗಲಿದ್ದಾರೆ. ಹಾಗೇ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತ-ಡೆನ್ಮಾರ್ಕ್​ ಹಸಿರು ಕಾರ್ಯತಂತ್ರದ ಪಾಲುದಾರಿಕೆಯ ಅವಲೋಕನ ಮತ್ತು ಈ ಸಹಭಾಗಿತ್ವವನ್ನು ಮತ್ತೊಂದು ಹೆಜ್ಜ ಮುಂದೆ ಕೊಂಡೊಯ್ಯಲು ಮೆಟ್ಟೆ ಫ್ರೆಡ್ರಿಕ್ಸನ್ ಭೇಟಿ ಅವಕಾಶ ಕಲ್ಪಿಸಿಕೊಡಲಿದೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ಹೇಳಿದ್ದಾರೆ. ಮೆಟ್ಟೆ ಫ್ರೆಡ್ರಿಕ್ಸನ್ ಕೊರೊನಾ ಸಾಂಕ್ರಾಮಿಕದ ನಂತರ ಭಾರತಕ್ಕೆ ಬರುತ್ತಿರುವ ಮೊದಲ ವಿದೇಶೀ ನಾಯಕರಾಗಿದ್ದು, ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.

TV9 Kannada

Leave a comment

Your email address will not be published. Required fields are marked *