ನವದೆಹಲಿ: ಕೊರೊನಾ ಎರಡನೇ ಅಲೆಗೆ ಭಾರತ ತೀವ್ರವಾಗಿ ತತ್ತರಿಸಿದೆ. ಕೊರೊನಾ ವೈರಸ್​​ ವಿರುದ್ದದ ಭಾರತದ ಹೋರಾಟವನ್ನ ಬಲಗೊಳಿಸಲು ಹಲವಾರು ದೇಶಗಳು ಭಾರತಕ್ಕೆ ಸಹಾಯಹಸ್ತ ಚಾಚಿವೆ. ಇದರ ಭಾಗವಾಗಿ ಇಂದು ತೈವಾನ್​ ಭಾರತಕ್ಕೆ ಮೊದಲ ಹಂತದಲ್ಲಿ 150 ಆಕ್ಸಿಜನ್ ಕಾನ್ಸಂಟ್ರೇಟರ್ಸ್, 500 ಆಕ್ಸಿನ್​ ಸಿಲಿಂಡರ್, ವೈದ್ಯಕೀಯ ಉಪಕರಣಗಳನ್ನು ಕಳುಹಿಸಿಕೊಟ್ಟಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ತೈವಾನ್ ಕಳುಹಿಸಿದ ಮೊದಲ ನೆರವು ಆಗಮಿಸಿದೆ.

ಕೊರೊನಾ ವಿರುದ್ಧ ಹೋರಾಟಕ್ಕೆ ನೆರವಾಗಲು ಈಗಾಗಲೇ ಭಾರತಕ್ಕೆ ಜರ್ಮನಿ, ಬೆಲ್ಜಿಯಂ, ಅಮೆರಿಕಾ ನೆರವು ನೀಡಿದೆ. ಸದ್ಯ ಮೊದಲ ತೈವಾನ್ ಮೊದಲ ಹಂತದಲ್ಲಿ ನೆರವು ಕಳುಹಿಸಿದ್ದು, ಎರಡನೇ ಹಂತದ ಬ್ಯಾಚ್​ ಕೂಡ ಶೀಘ್ರವೇ ಭಾರತವನ್ನು ತಲುಪಲಿದೆ ಎಂಬ ಮಾಹಿತಿ ಲಭಿಸಿದೆ.

ತೈವಾನ್ ಸರ್ಕಾರ ಪರವಾಗಿ ಭಾರತದಲ್ಲಿರುವ ತೈಪೈ ಆರ್ಥಿಕ ಮತ್ತು ಸಂಸ್ಕೃತಿಕ ಕೇಂದ್ರ ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಶುಭ ಕೋರಿದ್ದು, ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಇಂತಹ ಕಠಿಣ ಸಂದರ್ಭದಲ್ಲಿ ಮತ್ತಷ್ಟು ಬಲಗೊಳ್ಳುತ್ತದೆ. ಆಕ್ಸಿಜನ್ ಕಾನ್ಸಂಟ್ರೇಟರ್​ಗಳು, ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳನ್ನ ಭಾರತಕ್ಕೆ ಕಳಿಸುವ ಮೂಲಕ ಸಂಕಷ್ಟದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದೆ.

The post ಭಾರತಕ್ಕೆ ತೈವಾನ್ ಲವ್​​- ದೆಹಲಿ ತಲುಪಿದ 150 ಆಕ್ಸಿಜನ್ ಕಾನ್ಸಂಟ್ರೇಟರ್ಸ್, 500 ಆಕ್ಸಿನ್​ ಸಿಲಿಂಡರ್ appeared first on News First Kannada.

Source: newsfirstlive.com

Source link