ನವದೆಹಲಿ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ಬ್ಯಾಚ್ ಇಂದು ಭಾರತಕ್ಕೆ ಬಂದಿಳಿದಿದೆ.

ಇದನ್ನೂ ಓದಿ: ಭಾರತದಲ್ಲೇ ಸ್ಪುಟ್ನಿಕ್-ವಿ ಲಸಿಕೆ ಉತ್ಪಾದನೆ: ವ್ಯಾಕ್ಸಿನ್ ಕೊರತೆಗೆ ಬೀಳುತ್ತಾ ಬ್ರೇಕ್..?

ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಹೈದರಬಾದ್​ನ ಡಾ. ರೆಡ್ಡೀಸ್​ ಪ್ರಯೋಗಾಲಕ್ಕೆ ಪತ್ರ ಬರೆದಿದ್ದು, ದೆಹಲಿ ಜನರಿಗೆ ಲಸಿಕೆ ನೀಡಲು ಸುಮಾರು 67 ಲಕ್ಷ ಡೋಸ್ ಸ್ಪುಟ್ನಿಕ್-ವಿ  ವ್ಯಾಕ್ಸಿನ್ ಬೇಕಾಗಿದೆ ಎಂದಿದ್ದಾರೆ. ಆದ್ದರಿಂದ ಇಷ್ಟು ಲಸಿಕೆಯನ್ನ ದೆಹಲಿಗೆ ಪೂರೈಸುವಂತೆ ಪತ್ರದ ಮೂಲಕ ಪ್ರಯೋಗಾಲಕ್ಕೆ ಮನವಿ ಮಾಡಿದ್ದಾರೆ.

ಮೇ 1ರಂದು ಸ್ಪುಟ್ನಿಕ್- ವಿ ವ್ಯಾಕ್ಸಿನ್​ನ ಮೊದಲ ಬ್ಯಾಚ್ ಭಾರತಕ್ಕೆ ಬಂದಿದೆ. ದೇಶದ ಮೂರನೇ ಹಂತದ ವ್ಯಾಕ್ಸಿನೇಷನ್​ನಲ್ಲಿ ಸ್ಪುಟ್ನಿಕ್ ಲಸಿಕೆಯನ್ನೂ ಸಹ ಬಳಸಲಾಗುತ್ತದೆ. ಈ ಮೂಲಕ ದೇಶಿಯ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಜೊತೆಗೆ ಸ್ಪುಟ್ನಿಕ್​ ಕೂಡ ಮಹಾಮಾರಿ ವಿರುದ್ಧ ಹೋರಾಡಲಿದೆ. ಮೊನ್ನೆ ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯ ಮೊದಲ ಡೋಸ್​ ನೀಡಲಾಗಿದೆ.

ಇದನ್ನೂ ಓದಿ: ಸ್ಪುಟ್ನಿಕ್-ವಿ ಸಿಂಗಲ್ ಡೋಸ್ ಬೆಲೆ ಜಿಎಸ್​ಟಿ ಸೇರಿ ₹995.40 ಪೈಸೆ.. ದರನಿಗದಿ ಮಾಡಿದ ರೆಡ್ಡೀಸ್ ಲ್ಯಾಬ್

ಮೇ ಅಂತ್ಯದೊಳಗೆ ಒಟ್ಟು 3 ಲಕ್ಷ ಡೋಸ್ ಸ್ಪುಟ್ನಿಕ್​-ವಿ ಲಸಿಕೆ ದೇಶಕ್ಕೆ ಬರಲಿದೆ ಎಂದು ಭಾರತೀಯ ರಾಯಭಾರಿ ವೆಂಕಟೇಶ್ ವರ್ಮಾ ಈ ಹಿಂದೆ ಮಾಹಿತಿ ನೀಡಿದ್ದರು. ಜೂನ್​ ತಿಂಗಳೊಳಗೆ ಭಾರತಕ್ಕೆ ಒಟ್ಟು 50 ಲಕ್ಷ ಡೋಸ್ ಲಸಿಕ ಬರಲಿದೆ. ಮೇ ಅಂತ್ಯದೊಳಗೆ 1,50,000 ದಿಂದ 2,00,000 ವ್ಯಾಕ್ಸಿನ್​ನ ನಿರೀಕ್ಷೆಯಲ್ಲಿದ್ದೇವೆ. ಮೇ ಅಂತ್ಯದೊಳಗೆ 3,00,000 ವ್ಯಾಕ್ಸಿನ್ ಲಭ್ಯವಾಗಲಿದೆ. ಜೂನ್ ವೇಳೆಗೆ 5 ಲಕ್ಷ ಲಸಿಕೆ ಸಿಗಲಿದೆ ಎಂದು ಅವರು ತಿಳಿಸಿದ್ದರು.

 

The post ಭಾರತಕ್ಕೆ ಬಂದಿಳಿದ ಸ್ಫುಟ್ನಿಕ್-ವಿ ಲಸಿಕೆಯ 2ನೇ ಬ್ಯಾಚ್​​.. 67 ಲಕ್ಷ ಡೋಸ್​ಗೆ ಕ್ರೇಜಿವಾಲ್ ಮನವಿ appeared first on News First Kannada.

Source: newsfirstlive.com

Source link