ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯಗೆ ಬಹಳ ಬೇಕಾದವರು: ಸಿ.ಟಿ.ರವಿ | CT Ravi barrage against Siddaramaiah


ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯಗೆ ಬಹಳ ಬೇಕಾದವರು: ಸಿ.ಟಿ.ರವಿ

ಸಿಟಿ ರವಿ ಮತ್ತು ಸಿದ್ದರಾಮಯ್ಯ

ಭಾರತಕ್ಕೆ ಬಾಂಬ್ ಹಾಕುವುದನ್ನು ಹೆಡ್ಗೆವಾರ್ ಕಲಿಸಿಕೊಟ್ಟಿಲ್ಲ. ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯ ಅವರಿಗೆ ಬಹಳ ಬೇಕಾದವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು: ಭಾರತ್ ಮಾತಾ ಕಿ ಜೈ ಅನ್ನೋ ಶಿಕ್ಷಣವನ್ನು ಆರ್​ಎಸ್​ಎಸ್ (RSS) ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ (Keshav Baliram Hedgewar) ಕಲಿಸಿದ್ದರು. ಆದರೆ ಭಾರತಕ್ಕೆ ಬಾಂಬ್ ಹಾಕುವುದನ್ನು ಕಲಿಸಿಕೊಟ್ಟಿಲ್ಲ. ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯ ಅವರಿಗೆ ಬಹಳ ಬೇಕಾದವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳಿದ್ದಾರೆ. ಪಠ್ಯದಲ್ಲಿ ಹೆಡ್ಗೆವಾರ್ ಅವರ ಭಾಷಣವನ್ನು ಸೇರ್ಪಡೆ ಮಾಡಿದ ಬಗ್ಗೆ ಸಿದ್ದರಾಮಯ್ಯ ಅವರು ಟೀಕಿಸುತ್ತಿದ್ದಾರೆ. ಈ ಬಗ್ಗೆ ತಿರುಗೇಟು ನೀಡಿದ ಸಿ.ಟಿ.ರವಿ, ಹೆಡ್ಗೆವಾರ್ ಕಂಡರೆ ಸಿದ್ದರಾಮಯ್ಯ (Siddaramaiah)ನವರಿಗೆ ಏಕೆ ಸಂಕಟ? ಎಂದು ಪ್ರಶ್ನಿಸಿದ್ದಾರೆ.

TV9 Kannada


Leave a Reply

Your email address will not be published.