ಚಿತ್ರದುರ್ಗ: ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ತಿಳಿಸಿದ್ದಾರೆ.

ಕರ್ನಾಟಕ ಕಿವಿ, ಮೂಗು ಆಸ್ಪತ್ರೆಯಲ್ಲಿ ಕೋವಿಡ್-19ಗೆ ಚಿಕಿತ್ಸೆ ಪಡೆದಿದ್ದ ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ 50 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಗುಣಮುಖರಾದ ಒಂದು ತಿಂಗಳ ಬಳಿಕ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಪ್ರತಿದಿನ ಮಾಸ್ಕ್ ಧರಿಸಿ ಗಾಯವಾಗಿರುವ ಪರಿಣಾಮ, ಅವರ ಕಿವಿ ಭಾಗದಲ್ಲಿ ಬ್ಲಾಕ್ ಫಂಗಸ್ ಸೋಂಕು ಪತ್ತೆಯಾಗಿದೆ. ಆ ವ್ಯಕ್ತಿ ಹೆಚ್ಚು ಸ್ಟಿರಾಯ್ಡ್ ಬಳಸಿರುವುದರಿಂದ ಬ್ಲಾಕ್ ಫಂಗಸ್ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಬ್ಲಾಕ್ ಫಂಗಸ್ ನೋಡೆಲ್ ಅಧಿಕಾರಿ ಡಾ.ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.

ಚರ್ಮದಲ್ಲಿ ಪತ್ತೆಯಾಗಿರುವ ಈ ಬ್ಲಾಕ್ ಫಂಗಸ್ ಹೆಚ್ಚು ಮಧುಮೇಹವಿರುವ ರೋಗಿಗಳಲ್ಲಿ ಪತ್ತೆಯಾಗಲಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಈ ಸೋಂಕಿಗೆ ಸರ್ಜರಿ ಮೂಲಕ ಗುಣ ಮಾಡಲು ಸಿದ್ಧತೆಗಳಾಗಿವೆ. ಬ್ಲಾಕ್ ಫಂಗಸ್ ಆಗಿರುವ ಜಾಗವನ್ನು ಸಂಪೂರ್ಣ ಸರ್ಜರಿ ಮೂಲಕ ತೆಗೆದು ಹಾಕಲಾಗುತ್ತದೆ. ಬಳಿಕ ಬೇರೆಡೆಯ ಚರ್ಮವನ್ನು ಆ ಜಾಗಕ್ಕೆ ಹಾಕಿ ಸರ್ಜರಿ ಮಾಡುವ ಮೂಲಕ ಬ್ಲಾಕ್ ಫಂಗಸ್ ಸೋಂಕನ್ನು ಗುಣಪಡಿಸುವ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಇದನ್ನು ಓದಿ: ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ವಾರ್ಡ್ ಬಾಯ್ ಅರೆಸ್ಟ್

The post ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ appeared first on Public TV.

Source: publictv.in

Source link