ಭಾರತದಲ್ಲಿ ಅಂತರರಾಷ್ಟ್ರೀಯ ಪೇಟೆಂಟ್ ಸಲ್ಲಿಕೆಯ ಸಂಖ್ಯೆಯನ್ನು ಮೀರಿಸಿದ ದೇಶೀಯ ಪೇಟೆಂಟ್ ಸಲ್ಲಿಕೆ | The Number Of Domestic Patent Filing Surpasses The Number Of International Patent Filing In India


ಭಾರತದಲ್ಲಿ ಅಂತರರಾಷ್ಟ್ರೀಯ ಪೇಟೆಂಟ್ ಸಲ್ಲಿಕೆಯ ಸಂಖ್ಯೆಯನ್ನು ಮೀರಿಸಿದ ದೇಶೀಯ ಪೇಟೆಂಟ್ ಸಲ್ಲಿಕೆ

ಫೈಲಿಂಗ್ ಲೆಕ್ಕಾಚಾರ ಮುಂದಿಡುವ

ಐಪಿ (IP) ನಾವೀನ್ಯತೆ ಎಕೋ ಸಿಸ್ಟಮ್ ಸಂದರ್ಭದಲ್ಲಿ ಭಾರತವು ಮತ್ತೊಂದು ಮೈಲುಗಲ್ಲನ್ನು ಸಾಧಿಸಿದ್ದು, ಕಳೆದ 11 ವರ್ಷಗಳಲ್ಲಿ ಮೊದಲ ಬಾರಿಗೆ ದೇಶೀಯ ಪೇಟೆಂಟ್ (Patent) ಫೈಲಿಂಗ್ ಸಂಖ್ಯೆಯು 2022ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತೀಯ ಪೇಟೆಂಟ್ ಕಚೇರಿಯಲ್ಲಿ ಅಂತರರಾಷ್ಟ್ರೀಯ ಪೇಟೆಂಟ್ ಫೈಲಿಂಗ್ ಸಂಖ್ಯೆಯನ್ನು ಮೀರಿದೆ. ಒಟ್ಟು 19,796 ಪೇಟೆಂಟ್ ಅರ್ಜಿಗಳನ್ನು ಸಲ್ಲಿಸಲಾಗಿದ್ದು, 10,706 ಭಾರತೀಯ ಅರ್ಜಿದಾರರಿಂದ 9,090 ಭಾರತೀಯೇತರ ಅರ್ಜಿದಾರರಿಂದ ಸಲ್ಲಿಸಲಾಗಿದೆ. ಇದನ್ನು ಈ ಕೆಳಗಿನಂತೆ ನಿರೂಪಿಸಲಾಗಿದೆ:

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಪಿಯೂಷ್ ಗೋಯೆಲ್ ಅವರು ಭಾರತದಲ್ಲಿ ಐಪಿಆರ್ ಆಡಳಿತವನ್ನು ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಮತ್ತು ನಿಯಾಮವಳಿಯ ಹೊರೆಯನ್ನು ಕಡಿಮೆ ಮಾಡುವ ಮೂಲಕ ಡಿಪಿಐಐಟಿ ಮಾಡಿದ ನಿರಂತರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಡಿಪಿಐಐಟಿ ಮತ್ತು ಐಪಿ ಕಚೇರಿಯ ಸಂಘಟಿತ ಪ್ರಯತ್ನವು ಸಮಾಜದ ಎಲ್ಲ ಸ್ತರಗಳಲ್ಲಿ ಐಪಿ ಜಾಗೃತಿಯನ್ನು ಹೆಚ್ಚಿಸಿದೆ. ಈ ಪ್ರಯತ್ನಗಳು ಒಂದೆಡೆ ಐಪಿಆರ್ ಫೈಲಿಂಗ್‌ಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದು, ಮತ್ತೊಂದೆಡೆ ಐಪಿ ಕಚೇರಿಗಳಲ್ಲಿ ಪೇಟೆಂಟ್ ಅರ್ಜಿಯ ಬಾಕಿಯನ್ನು ಕಡಿಮೆ ಮಾಡಿದೆ. ಇದು ಜಾಗತಿಕ ಆವಿಷ್ಕಾರ ಸೂಚ್ಯಂಕದ ಅಗ್ರ 25 ರಾಷ್ಟ್ರಗಳಲ್ಲಿರುವ ಭಾರತದ ಮಹತ್ವಾಕಾಂಕ್ಷೆಯ ಗುರಿಯತ್ತ ಒಂದು ಹೆಜ್ಜೆ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಭಾರತದ ಐಪಿ ಆಡಳಿತವನ್ನು ಬಲಪಡಿಸಿದ ವರ್ಷಗಳಲ್ಲಿ ಸರ್ಕಾರವು ತೆಗೆದುಕೊಂಡ ಕೆಲವು ಪ್ರಮುಖ ಉಪಕ್ರಮಗಳು ಆನ್‌ಲೈನ್ ಫೈಲಿಂಗ್‌ನಲ್ಲಿ ಶೇ 10ರ ರಿಯಾಯಿತಿ, ಸ್ಟಾರ್ಟ್-ಅಪ್‌ಗಳು, ಸಣ್ಣ ಘಟಕಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ 80ರ ಶುಲ್ಕ ರಿಯಾಯಿತಿ ಮತ್ತು ಶೀಘ್ರ ಪರೀಕ್ಷೆಯ ನಿಬಂಧನೆಗಳನ್ನು ಒಳಗೊಂಡಿವೆ. ಇತರ ವರ್ಗಗಳೊಂದಿಗೆ ಸ್ಟಾರ್ಟ್​ಅಪ್‌ಗಳು ಮತ್ತು MSMEಗಳು ರಾಷ್ಟ್ರೀಯ ಐಪಿಆರ್ ನೀತಿ ಮತ್ತು ಸರ್ಕಾರವು ಮಾಡಿದ ಪ್ರಯತ್ನಗಳು ಸ್ಥಾಪಿಸಿದ ಮೂಲಾಧಾರದಿಂದಾಗಿ ಭಾರತವು ಈ ಕೆಳಗಿನ ಸಾಧನೆಗಳನ್ನು ಮಾಡುವುದಕ್ಕೆ ಸಾಧ್ಯವಾಗಿದೆ:

– ಪೇಟೆಂಟ್‌ಗಳ ಫೈಲಿಂಗ್ 2014-15ರಲ್ಲಿ 42,763ರಿಂದ 2021-22ರಲ್ಲಿ 66,440ಕ್ಕೆ ಏರಿದ್ದು, 7 ವರ್ಷಗಳ ಅವಧಿಯಲ್ಲಿ ಶೇ 50ಕ್ಕಿಂತ ಹೆಚ್ಚಾಗಿದೆ
– 2014-15 (5978)ಕ್ಕೆ ಹೋಲಿಸಿದರೆ 2021-22 (30,074) ರಲ್ಲಿ ಪೇಟೆಂಟ್‌ಗಳ ಅನುದಾನದಲ್ಲಿ ಸುಮಾರು ಐದು ಪಟ್ಟು ಹೆಚ್ಚಳ
– ವಿವಿಧ ತಾಂತ್ರಿಕ ಕ್ಷೇತ್ರಗಳಿಗಾಗಿ ಪೇಟೆಂಟ್ ಪರೀಕ್ಷೆಯ ಸಮಯವನ್ನು ಡಿಸೆಂಬರ್ 2016 ರಲ್ಲಿ 72 ತಿಂಗಳಿಂದ ಪ್ರಸ್ತುತ 5-23 ತಿಂಗಳಿಗೆ ಕಡಿತಗೊಳಿಸಲಾಗಿದೆ
– ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2015-16ರಲ್ಲಿ ಇದ್ದ 81ನೇ ಸ್ಥಾನಕ್ಕೆ ಹೋಲಿಸಿದರೆ 2021ರಲ್ಲಿ 46ನೇ ಸ್ಥಾನಕ್ಕೆ (+35 ಶ್ರೇಣಿಗಳು) ಹೆಚ್ಚಾಗಿದೆ

TV9 Kannada


Leave a Reply

Your email address will not be published.