ಸೌತ್​ ಆಫ್ರಿಕಾ ಮಾಜಿ ಕ್ರಿಕೆಟಿಗ​ ಎಬಿ ಡಿವಿಲಿಯರ್ಸ್​ಗೆ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಇಂಡಿಯನ್ ಪ್ರೀಮಿಯರ್​ ಲೀಗ್​​ನಲ್ಲಿ ಆಡುವ ಸೂಪರ್ ಸ್ಟಾರ್​​ ಬ್ಯಾಟ್ಸ್​ಮನ್​ಗೆ, ಭಾರತದಲ್ಲಿ ಎಷ್ಟರ ಮಟ್ಟಿಗೆ ಕ್ರೇಜ್​​ ಇದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. 14ನೇ ಆವೃತ್ತಿಯ ಐಪಿಎಲ್​ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಮರಳುತ್ತಾರೆ ಅಂತಾನೇ ಹೇಳಲಾಗಿತ್ತು. ಆದ್ರೆ, ಮತ್ತೊಬ್ಬ ಯುವ ಆಟಗಾರನ ಸ್ಥಾನ ಕಸಿದುಕೊಳ್ಳವುದು ಬೇಡವೆಂಬ ಕಾರಣಕ್ಕೆ, ನಿವೃತ್ತಿಯಿಂದ ಹೊರಬಾರದ ಎಬಿಡಿ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಕ್ಕೆ ನಿರಾಸೆಗೊಂಡಿದ್ದಾರೆ. ಆದ್ರೆ ಎಬಿಡಿಯನ್ನ ಆರಾಧಿಸುವ ಅಭಿಮಾನಿಗಳು, ತಮ್ಮ ಆರಾಧಕನ ಮೇಲಿನ ಪ್ರೀತಿಯನ್ನ ಮನೆಗೆ, ರಸ್ತೆಗೆ ಹೆಸರಿಡುವ ಮೂಲಕ ತೋರ್ಪಡಿಸಿದ್ದಾರೆ..

ಹೌದು..! ಭಾರತದಲ್ಲಿನ ಅಭಿಮಾನಿ ಓರ್ವ ತನ್ನ ಮನೆಗೆ ಎಬಿ ಡಿವಿಲಿಯರ್ಸ್ ಹೆಸರು ನಾಮಕರಣ ಮಾಡಿ ಅಭಿಮಾನ ಮರೆದಿದ್ದಾರೆ. ಇನ್ನೂ ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್ ಪರ ಬ್ಯಾಟ್​​ ಬೀಸುವ ಮಿಸ್ಟರ್​ 360ಗೆ ಕರ್ನಾಟಕಲ್ಲಿ ಮತ್ತಷ್ಟು ಅಭಿಮಾನಿ ಬಳಗವೇ ಇದೆ. ಅದ್ರಲ್ಲೂ ಬೆಂಗಳೂರಿನ ಓರ್ವ ಅಭಿಮಾನಿ ರಸ್ತೆ ರಾಜಾಜಿನಗರ ಒಂದು ರಸ್ತೆಗೆ ಎಬಿ ಡಿವಿಲಿಯರ್ಸ್ ರಸ್ತೆ ಎಂದು ನಾಮಕರಣ ಮಾಡಿ ಅಜಾತಶತ್ರುವಿನ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ, ಇದು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ನಾಮಕರಣ ಅಲ್ಲ..

The post ಭಾರತದಲ್ಲಿ ಡಿವಿಲಿಯರ್ಸ್​ ಕ್ರೇಜ್- ಮನೆಗೆ ಎಬಿಡಿ ಹೆಸರಿಟ್ಟ ಅಭಿಮಾನಿ appeared first on News First Kannada.

Source: newsfirstlive.com

Source link