ಕೊರೊನಾ ವೈರಸ್ ಮಣಿಸಲು ಭಾರತದ ಮತ್ತೊಂದು ಸ್ವದೇಶಿ ಮತ್ತೊಂದು ಲಸಿಕೆ ಸಿದ್ಧವಾಗಿದೆ.

ಸೋಂಕಿನ ವಿರುದ್ಧದ ಹೋರಾಟಕ್ಕೆ ಝೈಡಸ್ ಕ್ಯಾಡಿಲಾದ ZyCoV-D  ಲಸಿಕೆ ತಯಾರಾಗಿದ್ದು, ಔಷಧಿಗಳ ನಿಯಂತ್ರಕ ಮಂಡಳಿಯಿಂದ ತುರ್ತು ಬಳಕೆಯ ಅನುಮತಿ ಸಿಕ್ಕಿದರೆ ಇದು ವಿಶ್ವದ ಮೊದಲ ಡಿಎನ್ಎ ಲಸಿಕೆ ಆಗಲಿದೆ. ಮತ್ತು ಕೋವ್ಯಾಕ್ಸಿನ್ ಬಳಿಕ 2ನೇ ಸ್ವದೇಶಿ ಲಸಿಕೆ ಹಾಗೂ ಭಾರತದಲ್ಲಿ ಲಭ್ಯವಿರುವ ನಾಲ್ಕನೇ ಲಸಿಕೆ ಎನಿಸಿಕೊಳ್ಳಲಿದೆ.

ಲಸಿಕೆಯನ್ನು 3 ಹಂತಗಳಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದ್ದು ಮುಂದಿನ ವಾರ ತುರ್ತು ಬಳಕೆಗೆ ಅನುಮತಿ ಕೋರುವ ಸಾಧ್ಯತೆ ಇದೆ. ಲಸಿಕೆಯನ್ನು 12 ರಿಂದ 18 ವರ್ಷದೊಳಗಿನವರ ಮೇಲೂ ಪರೀಕ್ಷೆ ಮಾಡಲಾಗಿದೆ ಅಂತಾ ಲಸಿಕಾ ಸಂಸ್ಥೆ ಹೇಳಿದೆ.

ZyCoV-D ಡಿಎನ್‌ಎ ಲಸಿಕೆಯಾಗಿದ್ದು, ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸುವ ವೈರಸ್‌ನ ನಿರ್ದಿಷ್ಟ ಭಾಗಕ್ಕೆ ಜೆನೆಟಿಕ್ ಕೋಡ್​ ಕೊಂಡೊಯ್ಯುತ್ತದೆ.

The post ಭಾರತದಲ್ಲಿ ತಯಾರಾದ ವಿಶ್ವದ ಮೊದಲ DNA ಕೊರೊನಾ ಲಸಿಕೆ, ಮುಂದಿನ ವಾರ ಅನುಮತಿ ಕೋರುವ ಸಾಧ್ಯತೆ appeared first on News First Kannada.

Source: newsfirstlive.com

Source link