ಭಾರತದಲ್ಲಿ ಬೌಲಿಂಗ್​​ ಮಾಡೋದು ಅಷ್ಟು ಸುಲಭವಲ್ಲ-ಸುಮ್ನೆ ಹೇಳಿದ್ದಲ್ಲ ಹೀಗೆ

ನ್ಯೂಜಿಲೆಂಡ್ ವೇಗಿ ಮತ್ತು ಆರ್​​ಸಿಬಿ ತಂಡದ ಬೌಲರ್​​ ಕೈಲ್ ಜೇಮಿಸನ್ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆಡೋದು ಸವಾಲು ಎಂದಿದ್ದಾರೆ. ಈ ಸಂಬಂಧ ಮಾತಾಡಿದ ಕೈಲ್ ಜೇಮಿಸನ್, ಭಾರತದಲ್ಲಿ ಆಡುವುದು ಸ್ವದೇಶಕ್ಕೆ ಹಿಂತಿರುಗಿದ್ದಕ್ಕಿಂತ ಭಿನ್ನ ಎಂದರು.

ನಾನು ಭಾರತದಲ್ಲಿ ಹೆಚ್ಚು ಕ್ರಿಕೆಟ್ ಆಡಿಲ್ಲ. ಐಪಿಎಲ್‌ನ ಮೊದಲಾರ್ಧವು ಉತ್ತಮವಾಗಿತ್ತು, ಆದರೆ ಈಗ ಆಡುತ್ತಿರೋದು ವಿಭಿನ್ನ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ತಂಡದಲ್ಲಿರುವ ನೀಲ್ ವ್ಯಾಗ್ನರ್, ಟಿಮ್ ಸೌಥಿ ರಂತಹ ಅನುಭವಿಗಳ ಆಲೋಚನೆಗಳೊಂದಿಗೆ ಬೌಲ್ ಮಾಡುವುದು ಒಳ್ಳೆಯದು. ಇಲ್ಲಿ ಬೌಲ್ ಮಾಡುವುದು ಹೇಗೆ ಎಂಬುದರ ಕುರಿತು ಅವರ ಸಲಹೆ ಪಡೆದಿದ್ದೇನೆ ಎಂದು ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಹೇಳಿದರು.

The post ಭಾರತದಲ್ಲಿ ಬೌಲಿಂಗ್​​ ಮಾಡೋದು ಅಷ್ಟು ಸುಲಭವಲ್ಲ-ಸುಮ್ನೆ ಹೇಳಿದ್ದಲ್ಲ ಹೀಗೆ appeared first on News First Kannada.

News First Live Kannada

Leave a comment

Your email address will not be published. Required fields are marked *