ನವದೆಹಲಿ: ಹೊರಗಿನವರಿಗೆ ಭಾರತೀಯ ಪ್ರಜಾಪ್ರಭುತ್ವ ಗದ್ದಲದ ಗೂಡು ಮತ್ತು ಒಡೆದ ಮನೆ ಅನಿಸಿದ್ರೂ.. ದೇಶದ ವಿಚಾರ ಬಂದಾಗ ಭಾರತೀಯರು ಎಂದಿಗೂ ದೇಶದ ಪರ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇರುತ್ತೆ. ಇವತ್ತು ಅಂಥದ್ದೊಂದು ಅನುಭವ ಟ್ವಿಟರ್​ಗೆ ಆಗಿದೆ..

ಇವತ್ತು ಪಾರ್ಲಿಮೆಂಟರಿ ಪ್ಯಾನೆಲ್ ಮುಂದೆ ಟ್ವಿಟರ್​​​ ಪ್ಯಾನೆಲ್ ಅಟೆಂಡ್ ಮಾಡಿತ್ತು. ಈ ಪಾರ್ಲಿಮೆಂಟರಿ ಐಟಿ ಪ್ಯಾನೆಲ್​ನ ಅಧ್ಯಕ್ಷತೆಯನ್ನ ಕಾಂಗ್ರೆಸ್ ನಾಯಕ ಶಶಿ ಥರೂರ್​ ವಹಿಸಿದ್ರು.. ಅಲ್ಲಿ ಪ್ರಾರಂಭದಲ್ಲಿ ಏನಾಯ್ತು? ಅಂತಾ ನೋಡೋದಾದ್ರೆ..

ಶಶಿ ಥರೂರ್: ನೀವು ಭಾರತದಲ್ಲಿ ಯಾವ ರೂಲ್ಸ್​ ಫಾಲೋ ಮಾಡ್ತೀರಿ? ನೀವು ಭಾರತೀಯ ನಿಯಮಗಳನ್ನ ಪಾಲಿಸ್ತೀರಾ?

ಟ್ವಿಟರ್: ಇಲ್ಲ.. ನಾವು ನಮ್ಮದೇ ಆದ ಪಾಲಿಸಿ ಪಾಲಿಸುತ್ತೇವೆ..

ಶಶಿ ಥರೂರ್: ಭಾರತದಲ್ಲಿ ಭಾರತದ ಕಾನೂನೇ ಸುಪ್ರೀಂ.. ಇಲ್ಲಿ ಲಾ ಆಫ್ ದಿ ಲ್ಯಾಂಡ್ ಈಸ್ ಸುಪ್ರೀಂ.. ಅದನ್ನ ಟ್ವಿಟರ್ ಪಾಲಿಸಲೇ ಬೇಕು.. ಇಲ್ಲದಿದ್ದರೆ ದಂಡವನ್ನ ನಾವು ಯಾಕೆ ಹಾಕಬಾರದು?

ಯಾವಾಗ ಶಶಿ ಥರೂರ್​ ಈ ರೀತಿ ಹೇಳಿದ್ರೋ.. ಅದೂ ವಿಪಕ್ಷದ ನಾಯಕ ಹೀಗೆ ಹೇಳಿದಾಗ ಟ್ವಿಟರ್ ನಿಜಕ್ಕೂ ಅವಕ್ಕಾಗಿತ್ತು..

ಹೌದು.. ಈ ನೆಲದಲ್ಲಿರೋ ನಿಯಮಗಳೇ ಸುಪ್ರೀಂ, ನಿಮ್ಮ ಪಾಲಿಸಿಯಲ್ಲ ಎಂದು ಪಾರ್ಲಿಮೆಂಟರಿ ಪ್ಯಾನಲ್​​ ಟ್ವಿಟರ್​​ಗೆ ಖಡಕ್​​ ಆಗಿ ತಿಳಿಸಿದೆ.

ಟ್ವಿಟರ್​ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದೆ. ಕೇಂದ್ರ ಸರ್ಕಾರದ ನೋಟಿಸ್​ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾ ಇಂದು ಕಾಂಗ್ರೆಸ್​ ನಾಯಕ ಶಶಿ ತರೂರ್ ನೇತೃತ್ವದ ಪಾರ್ಲಿಮೆಂಟರಿ ಪ್ಯಾನಲ್ ಮುಂದೆ ತನ್ನ ಪ್ರತಿನಿಧಿಯನ್ನ ಕಳುಹಿಸಿತ್ತು.

ಟ್ವಿಟರ್​ ಇಂಡಿಯಾದ ಪಬ್ಲಿಕ್ ಪಾಲಿಸಿ ಮ್ಯಾನೇಜರ್ ಶಘುಫ್ತ ಕಮ್ರಾನ್ ಮತ್ತು ಲೀಗಲ್ ಕೌನ್ಸೆಲ್ ಆಯುಶಿ ಕಪೂರ್​ ಪಾರ್ಲಿಮೆಂಟರಿ ಪ್ಯಾನಲ್ ಎದುರು ಹಾಜರಾಗಿದ್ದರು. ಈ ವೇಳೆ ಟ್ವಿಟರ್​​ ಸರ್ಕಾರದ ಗೈಡ್​ಲೈನ್ಸ್​ ಹಾಗೂ ಸೋಶಿಯಲ್ ಪ್ಲಾಟ್​ಫಾರ್ಮ್​ ದುರ್ಬಳಕೆ ಮಾಡಿಕೊಳ್ಳುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಸಂದರ್ಭದಲ್ಲಿ ಟ್ವಿಟರ್​ ಇಂಡಿಯಾ, ತಾನು ತನ್ನ ನೀತಿ, ನಿಯಮವನ್ನ ಪಾಲಿಸುತ್ತಿರೋದಾಗಿ ಹೇಳಿತು. ಜೊತೆಗೆ ಪ್ಲಾಟ್​ಫಾರ್ಮ್​ ದುರ್ಬಳಕೆ ಮಾಡಿಕೊಳ್ತಿರೋದನ್ನ ಸಮರ್ಥಿಸಿಕೊಳ್ಳಲು ಮುಂದಾಗಿದೆ.

ಟ್ವಿಟರ್​ನ ಈ ಹೇಳಿಕೆಗೆ ವಾರ್ನಿಂಗ್ ಮಾಡಿದ ಪಾರ್ಲಿಮೆಂಟರಿ ಪ್ಯಾನಲ್​​. ಈ ನೆಲದ ಕಾನೂನೇ ಸರ್ವೋಚ್ಛ. ಕಂಪನಿ ಶಿಸ್ತಿನಿಂದ ಇರಬೇಕು. ಇಲ್ಲಿನ ಕಾನೂನು ಅಲ್ಲಂಘಿಸಿದ್ದಕ್ಕೆ ನಿಮಗ್ಯಾಕೇ ನಾವು ದಂಡ ವಿಧಿಸಬಾರದು ಅಂತಲೂ ಪ್ರಶ್ನೆ ಮಾಡಿದೆ.

 

The post ಭಾರತದಲ್ಲಿ ಭಾರತದ ಕಾನೂನೇ ಸುಪ್ರೀಂ.. ಟ್ವಿಟರ್​ಗೆ ಶಶಿ ತರೂರ್​​ ನೇತೃತ್ವದ ಪ್ಯಾನೆಲ್ ವಾರ್ನಿಂಗ್ appeared first on News First Kannada.

Source: newsfirstlive.com

Source link