ಬೆಂಗಳೂರು: ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಇದೀಗ ಭಾರತದಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಆನ್‍ಲೈನ್ ಬುಕ್ಕಿಂಗ್‍ಗೆ ಚಾಲನೆ ನೀಡಿದೆ. ಕಾರಣಾಂತರಗಳಿಂದ ಕಳೆದ ವರ್ಷ (2020) ಸೆಪ್ಟೆಂಬರ್‍ ನಲ್ಲಿ ಬುಕ್ಕಿಂಗ್ ವ್ಯವಸ್ಥೆಯನ್ನು ರದ್ದು ಮಾಡಿತ್ತು. ಇದೀಗ ಪುನಃ ಶುರುವಾಗಿದೆ.

ಮಂಗಳವಾರದಿಂದ ( ಏಪ್ರಿಲ್ 14)  ಭಾರತದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕಲ್ ಸ್ಕೂಟರ್ ನ ಮರು ಬುಕ್ಕಿಂಗ್ ಆರಂಭ ಮಾಡಿದೆ. 2000 ರೂ ಕೊಟ್ಟು ಬುಕ್ಕಿಂಗ್ ಮಾಡಬಹುದು. ಒಂದು ವೇಳೆ ಕ್ಯಾನ್ಸಲ್ ಮಾಡಿದರೆ, 1000 ರೂ. ವಾಪಸ್ಸು ನೀಡಲಾಗುತ್ತದೆ. ಬಜಾಜ್ ಚೇತಕ್ ಸ್ಕೂಟರ್‌ನ ಬೆಲೆ 1.15 ಲಕ್ಷ ರೂ ಇದ್ದು, ಎರಡು ವಿಧದಲ್ಲಿ ಲಭ್ಯವಿದೆ. ಬಜಾಜ್ ಚೇತಕ್ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್, ಒಕಿನಾವಾ ಮತ್ತು ಹೀರೋ ಎಲೆಕ್ಟ್ರಿಕ್ ಕೊಡುಗೆಗಳನ್ನು ಮೀರಿಸುವಂತಿದೆ.

ಬುಕ್ ಮಾಡೋದು ಹೇಗೆ ?

ಬಜಾಜ್ ಕಂಪನಿಯ ವಿದ್ಯುತ್ ಚಾಲಿತ ಸ್ಕೂಟರ್ ಬುಕ್ ಮಾಡುವುದು ತುಂಬ ಸುಲಭ. ಬಜಾಜ್ ವೆಬ್ಸೈಟ್‌ಗಳಲ್ಲಿ ಆನ್ಲೈನ್ ಮೂಲಕ ಬುಕ್ ಮಾಡಬಹುದು. ಇಲ್ಲವೇ ಪುಣೆ ಮತ್ತು ಬೆಂಗಳೂರಿನ ಅಧಿಕೃತ ಮಾರಾಟಗಾರರ ಮೂಲಕ ಬುಕ್ ಮಾಡಬಹುದು.

95 ಕಿ.ಮೀ ಮೈಲೇಜ್ :

ಈ ಸ್ಕೂಟರ್‍ ದೀರ್ಘ ಮೈಲೇಜ್ ನೀಡುತ್ತದೆ. ಈ ಎಲೆಕ್ಟ್ರಿಕಲ್ ವಾಹನದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಇದ್ದು, ಎಕೋ ಮೋಡ್‌ನಲ್ಲಿ 95 ಕಿ.ಮೀ ಮತ್ತು 85 ಕಿ.ಮೀ ಸ್ಪೋರ್ಟ್ಸ್ ಮೋಡ್‌ನಲ್ಲಿ ಓಡಿಸಬಹುದು. 70,000 ಕಿ.ಮೀವರೆಗೂ ಬ್ಯಾಟರಿ ಬ್ಯಾಕ್ ಅಪ್ ಇದ್ದು, 5 ಗಂಟೆ ಚಾರ್ಜ್ ಮಾಡಿದರೆ ಸಾಕು. ಮೂರು ವರ್ಷ ಅಥವಾ 50,000 ಕಿ.ಮೀ ಓಡಾಟಕ್ಕೆ ವಾರಂಟಿ ನೀಡಲಾಗುತ್ತದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More