ಭಾರತದಲ್ಲಿ ಮತ್ತೊಂದು ಸೋಂಕಿನ ಭೀತಿ; ಈ ಕೊವಿಡ್ ಹೊಸ ರೂಪಾಂತರಿ ಡೆಲ್ಟಾ ವೈರಸ್​ಗಿಂತಲೂ ಅಪಾಯಕಾರಿ! | Worse Than Delta Virus New Covid Variant Triggers Alert in India List of Strains You Must know


ಭಾರತದಲ್ಲಿ ಮತ್ತೊಂದು ಸೋಂಕಿನ ಭೀತಿ; ಈ ಕೊವಿಡ್ ಹೊಸ ರೂಪಾಂತರಿ ಡೆಲ್ಟಾ ವೈರಸ್​ಗಿಂತಲೂ ಅಪಾಯಕಾರಿ!

ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ಒಂದೂವರೆ ವರ್ಷದಿಂದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ತತ್ತರಿಸುವಂತೆ ಮಾಡಿದೆ. ಕೊರೊನಾಗೆ ಲಸಿಕೆ ಕಂಡುಹಿಡಿದು, ಎಲ್ಲರೂ ನಿರ್ಭೀತರಾಗಿ ಓಡಾಡುವ ದಿನಗಳು ಸಮೀಪಿಸಿತು ಎನ್ನುವಾಗಲೇ ಇದೀಗ ಕೊರೊನಾ ರೂಪಾಂತರಿ ವೈರಸ್​ಗಳ ಹಾವಳಿ ಶುರುವಾಗಿದೆ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ಸೋಂಕಿನ ಹೊಸ ತಳಿ ಭಾರೀ ಅಪಾಯಕಾರಿಯಾಗಿದೆ. ಈ ರೂಪಾಂತರಿ ವೈರಸ್ ಡೆಲ್ಟಾ ವೈರಸ್​ಗಿಂತಲೂ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ದಕ್ಷಿಣ ಆಫ್ರಿಕಾ, ಹಾಂಕಾಂಗ್ ಮತ್ತು ಬೋಟ್ಸ್​ವಾನಾ ದೇಶಗಳಿಂದ ಬರುವ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆಗೆ ಒಳಪಡಿಸುವಂತೆ ನಿನ್ನೆ ಆದೇಶ ಹೊರಡಿಸಿದೆ.

ಕೋವಿಡ್ ಸೋಂಕಿನಲ್ಲಿ ಈವರೆಗಿನ ಎಲ್ಲಾ ರೂಪಾಂತರಿಗಳಿಗಿಂತಲೂ ಭಿನ್ನವಾದ, ತತಕ್ಷಣಕ್ಕೆ ಹಾಗೂ ವೇಗವಾಗಿ ಪ್ರಸರಿಸುವ ಹೊಸ ರೂಪಾಂತರಿ ಕೊರೊನಾ ದಕ್ಷಿಣ ಆಫ್ರಿಕಾ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ಹಿನ್ನೆಲೆಯಲ್ಲಿ ಕಟ್ಟಚ್ಚರ ವಹಿಸಿದ್ದು. ಮುಜಾಂಗ್ರತೆಗಾಗಿ ವಿಶ್ವಸಂಸ್ಥೆ ತುರ್ತು ಸಭೆ ಕರೆದಿದೆ.

ಬಿ 1.1.529 ಎಂದು ಸಂಕೇತಿಸಲಾದ ಹೊಸ ರೂಪಾಂತರಿ ಕೊರೊನಾ ಬೋಟ್ಸ್​ವಾನಾದಲ್ಲಿ ಮೂರು, ದಕ್ಷಿಣ ಆಫ್ರಿಕಾದಲ್ಲಿ ಆರು, ಹಾಂಕ್‍ಕಾಂಗ್‍ನಲ್ಲಿ ಎರಡು ಪ್ರಕರಣಗಳು ನಿನ್ನೆ ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದ ಮೂರು ಪ್ರಾಂತ್ಯಗಳಲ್ಲಿ ಒಟ್ಟು 22 ಪ್ರಕರಣಗಳು ಪತ್ತೆಯಾಗಿವೆ. ಈ ಹೊಸ ಕೊರೊನಾ ಸೋಂಕು ಅತ್ಯಂತ ಅಪಾಯಕಾರಿ ಎನ್ನಲಾಗಿದ್ದು, ಇದಕ್ಕೆ ಲಸಿಕೆಯೂ ಲಭ್ಯವಿಲ್ಲ.

ಹೀಗಾಗಿ, ವಿಶ್ವದ ಹಲವು ರಾಷ್ಟ್ರಗಳು ಕಟ್ಟೆಚ್ಚರ ವಹಿಸಿದ್ದು, ಹೊಸ ಸೋಂಕು ಪತ್ತೆಯಾದ ಆರು ರಾಷ್ಟ್ರಗಳಿಂದ ವಿಮಾನ ಸಂಚಾರಕ್ಕೆ ಬ್ರಿಟನ್ ತಾತ್ಕಾಲಿಕ ಕಡಿವಾಣ ಹಾಕಿದೆ. ಬೋಟ್ಸ್​ವಾನ, ಜಿಂಬಾಂಬೆ ಮೋಜಬಿಕ್ಯೂ, ನಂಬಿಯಾ, ಇಸ್ಟವಾನಿ, ದಕ್ಷಿಣ ಆಫ್ರಿಕಾ, ಲೆಸೋಥೋ ರಾಷ್ಟ್ರಗಳ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಆಫ್ರಿಕಾದಲ್ಲಿ ದೈನಂದಿನ ಕೊರೊನಾ ಸೋಂಕುಗಳ ಸಂಖ್ಯೆ ಈ ತಿಂಗಳ ಆರಂಭದಿಂದ ಹತ್ತು ಪಟ್ಟು ಹೆಚ್ಚಾಗಿದೆ. ಹಠಾತ್ ಸ್ಪೈಕ್ ಮತ್ತು ಹೊಸ ರೂಪಾಂತರಕ್ಕೆ ಪ್ರತಿಕ್ರಿಯಿಸಿದ ಬ್ರಿಟನ್ ದೇಶ ಮತ್ತು ಇತರ 5 ದಕ್ಷಿಣ ಆಫ್ರಿಕಾದ ರಾಷ್ಟ್ರಗಳಿಂದು ಬೇರೆ ದೇಶಗಳಿಗೆ ಪ್ರಯಾಣವನ್ನು ನಿಷೇಧಿಸಲಾಗಿದೆ. ಈ ರೂಪಾಂತರವು ಡೆಲ್ಟಾಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಡೆಲ್ಟಾ:
ಡೆಲ್ಟಾ ರೂಪಾಂತರವನ್ನು (B.1.617.2) ಭಾರತದಲ್ಲಿ ಮೊದಲು ಗುರುತಿಸಲಾಯಿತು. ಇದು ಇತರ ರೂಪಾಂತರಗಳಿಗಿಂತ ಹೆಚ್ಚು ಸುಲಭವಾಗಿ ಹರಡುತ್ತದೆ ಮತ್ತು ಇತರ ರೂಪಾಂತರಗಳಿಗಿಂತ ಹೆಚ್ಚು ತೀವ್ರತರವಾದ ಪ್ರಕರಣಗಳಿಗೆ ಕಾರಣವಾಗಬಹುದು. ಇಲ್ಲಿಯವರೆಗೆ, ಡೆಲ್ಟಾ ರೂಪಾಂತರಿ ವಿರುದ್ಧ ಲಸಿಕೆಗಳು ಪರಿಣಾಮಕಾರಿ ಎಂದು ಸಾಬೀತಾಗಿದೆ. ಡೆಲ್ಟಾ ರೂಪಾಂತರವು 2021ರ ಆರಂಭದಲ್ಲಿ ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿತು. ಡೆಲ್ಟಾ ರೂಪಾಂತರಿಯಿಂದ ಪಾರಾಗಲು ನಿಮ್ಮ ಕೈಗಳನ್ನು ತೊಳೆಯಿರಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಕಿಕ್ಕಿರಿದ ಸ್ಥಳಗಳಲ್ಲಿ ಮಾಸ್ಕ್ ಧರಿಸಿ.

ಡೆಲ್ಟಾ ಪ್ಲಸ್:
AY.4.2 ರೂಪಾಂತರವನ್ನು ‘ಡೆಲ್ಟಾ ಪ್ಲಸ್’ ರೂಪಾಂತರ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಮೊದಲು ಕಂಡುಬಂದ ಡೆಲ್ಟಾ ರೂಪಾಂತರದ ಜುಲೈನಿಂದ ಹೆಚ್ಚಾಗಿದೆ. ಇವುಗಳ ಹೆಚ್ಚಿನ ಪ್ರಕರಣಗಳು ಇಂಗ್ಲೆಂಡ್​ನಲ್ಲಿ ಸಂಭವಿಸಿವೆ.

ಆಲ್ಫಾ:
2020ರ ಕೊನೆಯಲ್ಲಿ ಕಂಡುಬಂದ ಆಲ್ಫಾ (B.1.1.7) ರೂಪಾಂತರವು ಆಗ್ನೇಯ ಇಂಗ್ಲೆಂಡ್‌ನ ಜನರಲ್ಲಿ ಕಂಡುಬರುವ ಕೋವಿಡ್-19 ಪ್ರಕರಣಗಳಲ್ಲಿ ಜೀನ್ ರೂಪಾಂತರಗಳು ಮೊದಲು ಕಂಡುಬಂದಿತ್ತು. ಈ ರೂಪಾಂತರವು ಇತರ ದೇಶಗಳಲ್ಲಿ ಕೂಡ ವರದಿಯಾಗಿದೆ. ಅಮೆರಿಕದ ವಿಜ್ಞಾನಿಗಳು ಈ ರೂಪಾಂತರಗಳು ವೈರಸ್ ಅನ್ನು 70% ರಷ್ಟು ಹೆಚ್ಚು ಹರಡುವಂತೆ ಮಾಡಬಹುದು ಎಂದು ಅಂದಾಜಿಸಿದ್ದಾರೆ. ಈ ವೈರಸ್ ಹೆಚ್ಚು ಸುಲಭವಾಗಿ ಹರಡಬಹುದು.

ಬೀಟಾ:
ಬೀಟಾ ರೂಪಾಂತರ (B.1.351) ಮತ್ತು ವೈರಸ್‌ನ ಇತರ ರೂಪಾಂತರಗಳು ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾ ಸೇರಿದಂತೆ ಇತರ ದೇಶಗಳಲ್ಲಿ ಕಂಡುಬಂದಿವೆ. ಬೀಟಾ ರೂಪಾಂತರವು ಮೂಲ ವೈರಸ್‌ಗಿಂತ ಹೆಚ್ಚು ಸುಲಭವಾಗಿ ಹರಡುತ್ತದೆ ಆದರೆ ಕೆಟ್ಟ ಅನಾರೋಗ್ಯವನ್ನು ಉಂಟುಮಾಡುವುದಿಲ್ಲ.

ಗಾಮಾ:
ಗಾಮಾ ರೂಪಾಂತರ (P.1) ಅನ್ನು ಮೊದಲ ಬಾರಿಗೆ ಜನವರಿ 2021ರಲ್ಲಿ ಬ್ರೆಜಿಲ್‌ನಿಂದ ಜಪಾನ್‌ಗೆ ಪ್ರಯಾಣಿಸಿದ ಜನರಲ್ಲಿ ತಜ್ಞರು ಕಂಡುಹಿಡಿದರು. ಆ ತಿಂಗಳ ಅಂತ್ಯದ ವೇಳೆಗೆ, ಇದು ಅಮೆರಿಕದಲ್ಲಿ ಕಾಣಿಸಿಕೊಂಡಿತು. ಗಾಮಾ ರೂಪಾಂತರವು ವೈರಸ್‌ನ ಹಿಂದಿನ ತಳಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಮತ್ತು ಇದು ಈಗಾಗಲೇ ಕೊವಿಡ್ ಹೊಂದಿರುವ ಜನರಿಗೆ ಸೋಂಕು ತಗುಲಿಸಬಹುದು.

LAMDA:
ಪೆರು, ಈಕ್ವೆಡಾರ್, ಅರ್ಜೆಂಟೀನಾ ಮತ್ತು ಬ್ರೆಜಿಲ್ ಸೇರಿದಂತೆ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಈ ರೂಪಾಂತರಿ ಸೋಂಕಿನ ತ್ವರಿತ ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಗಮನಿಸಿತು. ಕೊರೊನಾ ರೂಪಾಂತರವಾದ ಲ್ಯಾಂಬ್ಡಾ (C.37) ಈ ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿತು.

ಬಿ.1.1.529:
ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಹೊಸ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆಯು ಇನ್ನೂ ಹೆಸರಿಸಿಲ್ಲ. ಈ ರೂಪಾಂತರಿಗೆ ವೈಜ್ಞಾನಿಕವಾಗಿ B.1.1.529 ಎಂದು ಕರೆಯಲಾಗುತ್ತದೆ. ದಕ್ಷಿಣ ಆಫ್ರಿಕಾದ ಪ್ರಯಾಣಿಕರಲ್ಲಿ ಬೋಟ್ಸ್​ವಾನಾ ಮತ್ತು ಹಾಂಗ್ ಕಾಂಗ್‌ನಲ್ಲಿ ಈ ರೂಪಾಂತರವು ಪತ್ತೆಯಾಗಿದೆ. ಇಲ್ಲಿಯವರೆಗೆ, ಬೋಟ್ಸ್‌ವಾನಾದಲ್ಲಿ (3 ಪ್ರಕರಣಗಳು ಸೇರಿದಂತೆ ಹಲವು ವಿಭಿನ್ನ ಪ್ರಕರಣಗಳು ವರದಿಯಾಗಿವೆ. ), ದಕ್ಷಿಣ ಆಫ್ರಿಕಾ (6 ಪ್ರಕರಣಗಳು) ಮತ್ತು ಹಾಂಗ್ ಕಾಂಗ್ (1 ಪ್ರಕರಣ) ಪತ್ತೆಯಾಗಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾ ರೂಪಾಂತರಿ ಪತ್ತೆ; ವಿಶ್ವಸಂಸ್ಥೆ ಎಚ್ಚರಿಕೆಯ ಬೆನ್ನಲ್ಲೇ ನೂತನ ನಿರ್ಧಾರ ಪ್ರಕಟಿಸಿದ ಯುಕೆ

ಹೊಸ ಕೊವಿಡ್-19 ರೂಪಾಂತರಿ ಬಗ್ಗೆ ಕೇಂದ್ರ ಎಚ್ಚರಿಕೆ; ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್

TV9 Kannada


Leave a Reply

Your email address will not be published. Required fields are marked *