ನವದೆಹಲಿ: ಭಾರತದಲ್ಲಿ ಟ್ವಿಟರ್​ ತನ್ನ ಮಧ್ಯವರ್ತಿ ವೇದಿಕೆ ಸ್ಥಾನಮಾನವನ್ನು ಕಳೆದುಕೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ

ದೇಶದಲ್ಲಿ ಹೊಸದಾಗಿ ಜಾರಿ ಮಾಡಲಾಗಿರುವ ಮಾರ್ಗಸೂಚಿಗಳನ್ನ ಟ್ವಿಟರ್ ಅಳವಡಿಸಿಕೊಂಡಿಲ್ಲ. ಭಾರತದ ಹೊಸ ಕಾನೂನುಗಳನ್ನು ಒಪ್ಪಿಕೊಳ್ಳದ ಏಕೈಕ ವೇದಿಕೆಯೆಂದರೆ ಅದು ಟ್ವಿಟರ್ ಮಾತ್ರ. ಹೀಗಾಗಿ ಇಂಟರ್​ಮೀಡಿಯರಿ ಪ್ಲಾಟ್​ಫಾರ್ಮ್​ ಸ್ಥಾನಮಾನವನ್ನ ಕಳೆದುಕೊಳ್ಳಲಿದೆ ಎಂದು ಹೇಳಲಾಗ್ತಿದೆ.

ಮಧ್ಯವರ್ತಿ ಸ್ಥಾನಮಾನ ಕಳೆದುಕೊಂಡರೆ ಏನಾಗುತ್ತದೆ..? 

ಮಧ್ಯವರ್ತಿ ವೇದಿಕೆ ಸ್ಥಾನ ಮಾನವನ್ನ ಕಳೆದುಕೊಳ್ಳುವ ಮೂಲಕ ಸದ್ಯ ಟ್ವಿಟರ್ ಕಾನೂನು ರಕ್ಷಣೆಯನ್ನ ಕಳೆದುಕೊಂಡಂತಾಗಿದೆ. ಮಧ್ಯವರ್ತಿ ಸ್ಥಾನಮಾನ ಹೊಂದಿರುವವರೆಗೂ ಯಾವುದೇ ಸೋಷಿಯಲ್ ಮೀಡಿಯಾ ತನ್ನ ವೇದಿಕೆಯಲ್ಲಿ ಪ್ರಕಟವಾಗುವ ಕಂಟೆಂಟ್​ಗಳ ಹೊಣೆಗಾರಿಕೆಯಿಂದ ದೂರ ಉಳಿದಿರುತ್ತವೆ. ಆದ್ರೆ ಈ ಸ್ಥಾನಮಾನವನ್ನ ಕಳೆದುಕೊಂಡ ಸೋಷಿಯಲ್ ಮೀಡಿಯಾಗಳು ಮುಂದೆ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಪ್ರಕಟವಾಗುವ ಕಂಟೆಂಟ್​ಗಳಿಗೆ ತಾನೇ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಹಾಗೂ ಕಾನೂನು ವಿಚಾರಣೆಗೆ ಒಳಗಾಗಬೇಕಾಗುತ್ತದೆ.

 

The post ಭಾರತದಲ್ಲಿ ಮಧ್ಯವರ್ತಿ ವೇದಿಕೆ ಸ್ಥಾನಮಾನ ಕಳೆದುಕೊಳ್ಳಲಿದೆ ಟ್ವಿಟರ್ appeared first on News First Kannada.

Source: newsfirstlive.com

Source link