ಭಾರತದಲ್ಲಿ ಕೊರೊನಾ ಸೋಂಕು ಬರೀ ಅಲೆಯಲ್ಲ ಬದಲಿಗೆ ರಣಭೀಕರ ಸುನಾಮಿಯಾಗಿ ಬದಲಾಗಿದೆ. ಈ ರಣ ಭೀಕರ ಸುನಾಮಿಯಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದರೆ, ಲಕ್ಷಾಂತರ ಜನರು ಇನ್ನಿಲ್ಲದ ಸಂಕಟ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ  ಅಮೆರಿಕಾ ಕೂಡ ಭಾರತದಲ್ಲಿರುವ ತನ್ನ ನಾಗರಿಕೆ ಶಾಕಿಂಗ್ ಎಚ್ಚರಿಕೆ ನೀಡಿದೆ.

ಬರುವುದಾದರೆ ಬಂದು ಬಿಡಿ

ಭಾರತದಲ್ಲಿ ಕೊರೊನಾ ಸೋಂಕು ಮಿತಿ ಮೀರಿದೆ. ಈ ಕಾರಣದಿಂದಾಗಿ ಇಲ್ಲಿ ವಾಸವಿರುವ ನಮ್ಮ ನಾಗರಿಕರಿಗೂ ಚಿಕಿತ್ಸೆ ಕೊಡಿಸೋದಾಗಲಿ ಅಥವಾ ಸಹಾಯ ಮಾಡೋದಾಗಲಿ ದಿನದಿಂದ ದಿನಕ್ಕೆ ಕಷ್ಟವಾಗ್ತಿದೆ. ಹೀಗಾಗಿ, ಯಾರಾದರೂ ಅಮೆರಿಕನ್ನರು ಸ್ವದೇಶಕ್ಕೆ ಮರಳು ಇಚ್ಛೆ ಪಟ್ಟರೆ, ಈಗಿರುವ ಕಮರ್ಷಿಯಲ್ ಫ್ಲೈಟ್ ಹತ್ತಿ ಮರಳಿ ಬಂದು ಬಿಡಿ ಅಂತಾ ಅಮೆರಿಕಾ ಕರೆ ಕೊಟ್ಟಿದೆ. ಸದ್ಯಕ್ಕೆ ಭಾರತ ಮತ್ತು ಅಮೆರಿಕಾದ ನಡುವೆ ನೇರ ಕಮರ್ಷಿಯಲ್ ವಿಮಾನಗಳು ಲಭ್ಯ ಇವೆ. ಈ ಸೌಲಭ್ಯ ಬಳಸಿಕೊಂಡು ಸ್ವದೇಶಕ್ಕೆ ಮರಳುವುದು ಉತ್ತಮ ಅಂತಾ ಅದು ಹೇಳಿದೆ.

ಅಲ್ಲದೇ ಭಾರತದಲ್ಲಿರುವ ಅಮೆರಿಕನ್ನರು  step.state.gov  ಈ ವೆಬ್​ಸೈಟ್​ನಲ್ಲಿ ರೆಜಿಸ್ಟರ್ ಮಾಡಿಕೊಳ್ಳಿ.. ಇದರಲ್ಲಿ ನಾವು ನಿರಂತರವಾಗಿ ಭಾರತದಲ್ಲಿ ನಿಮ್ಮ ಸೇಫ್ಟಿ ಮತ್ತು ಹೆಲ್ತ್​ ಬಗ್ಗೆ  ಮಾಹಿತಿ ನೀಡುತ್ತಿರುತ್ತೇವೆ ಅಂತಾ ಅದು ತಿಳಿಸಿದೆ. ಈ ಬಗ್ಗೆ ಭಾರತದಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಗಳು ಟ್ವೀಟ್ ಮಾಡಿ ಮಾಹಿತಿ ನೀಡಿವೆ.

The post ಭಾರತದಲ್ಲಿ ರಣ ಭೀಕರ ಕೊರೊನಾ; ಇಲ್ಲಿನ ತನ್ನ ನಾಗರಿಕರಿಗೆ ಶಾಕಿಂಗ್ ಎಚ್ಚರಿಕೆ ಕೊಟ್ಟ ಅಮೆರಿಕಾ appeared first on News First Kannada.

Source: newsfirstlive.com

Source link