ಭಾರತದಲ್ಲಿ ಲಾಂಚ್ ಆದ ಗೆಲಾಕ್ಸಿ ಎ22ಎಸ್ 5ಜಿ ಸ್ಮಾರ್ಟ್ ಫೋನನ್ನು ಸ್ಯಾಮ್ಸಂಗ್ ರಷ್ಯಾದಲ್ಲೂ ಬಿಡುಗಡೆ ಮಾಡಿದೆ


Samsung A22S 5G

ಮೊಬೈಲ್ ಪೋನ್​ಗಳ ಮಾರ್ಕೆಟ್ ನಲ್ಲಿ ಆತಿಹೆಚ್ಚು ಪಾಲುಹೊಂದಿ ಜಾಗತಿಕ ಲೀಡರ್ ಅನಿಸಿಕೊಂಡಿರುವ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಸಂಸ್ಥೆಯು ತನ್ನ ಗೆಲಾಕ್ಸಿ ಎ22 5ಜಿ ಸ್ಮಾರ್ಟ್ ಫೋನನ್ನು ಭಾರತದಲ್ಲಿ ಲಾಂಚ್ ಮಾಡಿದ್ದು ಇದೇ ವರ್ಷ ಜುಲೈನಲ್ಲಿ. ಭಾರತದಲ್ಲಿ ಪೋನಿಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಉತ್ತೇಜಿತಗೊಂಡಿರುವ ಕಂಪನಿಯು ಅದೇ ಮಾಡೆಲ್ ಅನ್ನು ಈಗ ರಷ್ಯಾನಲ್ಲೂ ಲಾಂಚ್ ಮಾಡಿದೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕಮ್ಯುನಿಸ್ಟ್ ರಾಷ್ಟ್ರದಲ್ಲೂ ಗೆಲಾಕ್ಸಿ ಎ22 5ಜಿ ಫೋನಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

ಅಂದಹಾಗೆ, ಗೆಲಾಕ್ಸಿ ಎ22 5ಜಿ 48 ಮೆಗಾ ಪಿಕ್ಸೆಲ್ ಮೇನ್ ಕೆಮೆರಾ ಮತ್ತು 5,000 ಎಮ್ ಎ ಎಚ್ ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ಮಿಡಿಯಾ ಟೆಕ್ ಡೈಮೆನ್ಸಿಟಿ 700 ಎಸ್ಒಸಿಯಿಂದ ಚಾಲಿತಗೊಳ್ಳುತ್ತದೆ. ಈ ಫೋನ್ 6.6 ಇಂಚಿನ ಟಿಎಫ್ಟಿ ಎಲ್ ಸಿ ಡಿ ಡಿಸ್ಪ್ಲೇ ಮತ್ತು 8 ಮೆಗಾಪಿಕ್ಸಲ್ ಸೆಲ್ಫೀ ಕೆಮೆರಾ ಹೊಂದಿದೆ.

ಹೊಸ ಸ್ಯಾಮ್ಸಂಗ್ ಗೆಲಾಕ್ಸಿ ಎ22ಎಸ್ 5G ಬೆಲೆ ಮತ್ತು ಲಭ್ಯತೆಯನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ. ಮಿಂಟ್, ಗ್ರೇ ಮತ್ತು ವೈಟ್ ಬಣ್ಣಗಳಲ್ಲಿ ಗೆಲಾಕ್ಸಿ ಎ22ಎಸ್ 5G ಫೋನ್ ಗಳು ಲಭ್ಯವಿವೆ. ಇದು ಎರಡು ಕಾನ್ಫಿಗರೇಶನ್‌ಗಳಲ್ಲಿ 4 ಜಿಬಿ ಱಮ್ ಮತ್ತು 64 ಜಿಬಿ ಸಂಗ್ರಹಣೆ ಮತ್ತು 4ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ.

ಫೋನಿನ ಸ್ಪೆಸಿಫಿಕೇಶನ್ ಗಳಿಗೆ ವಾಪಸ್ಸು ಬರುವುದಾದರೆ, ಸ್ಯಾಮ್ಸಂಗ್ ಗೆಲಾಕ್ಸಿ ಎ22 ಎಸ್ 5G ಆಂಡ್ರಾಯ್ಡ್-ಆಧಾರಿತ ವನ್ ಯುಐನಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು 6.6-ಇಂಚಿನ ಪೂರ್ಣ-ಎಚ್ ಡಿ+ (1,080×2,408 ಪಿಕ್ಸೆಲ್‌ಗಳು) ಟಿ ಎಫ್ ಟಿ ಎಲ್ ಸಿ ಡಿ ಡಿಸ್ಪ್ಲೇ ಜೊತೆಗೆ ವಾಟರ್‌ಡ್ರಾಪ್-ಶೈಲಿಯ ನಾಚ್ ಮತ್ತು 90 ಎಚ್ ಜೆಡ್ ರಿಫ್ರೆಶ್ ದರವನ್ನು ಹೊಂದಿದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಎಸ್ ಒ ಸಿ ಯಿಂದ 4ಜಿಬಿ ಱಮ್ ನೊಂದಿಗೆ ಜೋಡಿಸಲ್ಪಟ್ಟಿದೆ. ಆಂತರಿಕ ಸಂಗ್ರಹಣೆಯು 64 ಜಿಬಿ ಮತ್ತು 128 ಜಿಬಿ ಆಯ್ಕೆಗಳಲ್ಲಿ ಬರುತ್ತದೆ, ಜೊತೆಗೆ ಮೀಸಲಾದ ಮೈಕ್ರೊ ಎಸ್ ಡಿ ಕಾರ್ಡ್ ಸ್ಲಾಟ್ ಬಳಸಿಕೊಂಡು ಮತ್ತಷ್ಟು ವಿಸ್ತರಿಸುವ ಹೆಚ್ಚುವರಿ ಆಯ್ಕೆಯೊಂದಿಗೆ ಬರುತ್ತದೆ.

ಇದನ್ನೂ ಓದಿ:  Viral Video: ಮದುವೆ ದಿನ ಅಪ್ಪನ ಜೊತೆಗೆ ವೇದಿಕೆಯ ಮೇಲೆ ಕುಣಿದ ಮಗಳು; ಹೃದಯಸ್ಪರ್ಶಿ ವಿಡಿಯೊ ವೈರಲ್

TV9 Kannada


Leave a Reply

Your email address will not be published. Required fields are marked *